ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಸಬಾ ಹೋಬಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಸಂಘಕ್ಕೆ ಚುನಾವಣೆ ದಿನಾಂಕ ದಿಂದ ಮುಂದಿನ ಐದು ವರ್ಷಗಳಿಗೆ ಚುನಾವಣೆಗಾಗಿ 12-01-2025 ನಿಗದಿ ಪಡಿಸಲಾಗಿತ್ತು ಜ 8 ರಂದು ನಾಮಪತ್ರ ವಾಪಸಾತಿ ಯ ನಂತರ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸಹಕಾರ ಸಂಘಗಳ ನಿಯಮ 1960 ರ ಪ್ರಕಾರ ನಿಯಮ 14 ಜಿ ನಲ್ಲಿನ ಉಪಬಂಧಾನುಸಾರ ಸಂಘದ ರಿಟರ್ನಿಂಗ್ ಅಧಿಕಾರಿ ನಾಗವೇಣಿ ಕೆ ಎನ್ ಘೋಷಿಸಿದ್ದಾರೆ.
ಚುನಾಯಿತ ಸದಸ್ಯರುಗಳಾದ ಸಾಮಾನ್ಯ ಸ್ಥಾನಕ್ಕೆ ಕೆ.ಹೆಚ್ ರಂಗರಾಜು ಎಂ ಚನ್ನಬಸವಾರಾಧ್ಯ.ಎಸ್ ಪದ್ಮನಾಭ ,ಪಿ. ಶಿವಕುಮಾರ್ ಎಸ್ ಎಂ ಮಹಾದೇವ್. ಸಾಲಗಾರರ ಕ್ಷೇತ್ರ ಜೆ. ಮಂಜುನಾಥ, ಮಹಿಳಾ ಮೀಸಲು ಕಮಲಾ ಆನಂದ್, ಶೋಭಾ ವೀರಭದ್ರಯ್ಯ, ಹಿಂದುಳಿದ ಪ್ರವರ್ಗ ಎ.ಮೀಸಲು,ನಾಗಭೂಷಣ್ ಹಿಂದುಳಿದ ಪ್ರವರ್ಗ ಬಿ ಮೀಸಲು. ಜೆ ವೈ ಮಲ್ಲಪ್ಪ,
ಪರಿಶಿಷ್ಠ ಜಾತಿ ಮೀಸಲು. ಡಿ. ಹನುಮಂತರಾಜು, ಪರಿಶಿಷ್ಟ ಪಂಗಡ ಮೀಸಲು ಯಶೋಧ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಧೀರಜ್ ಮುನಿರಾಜು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.