ಎಂದೂ ಕಂಡು ಕೇಳರಿಯದ ನೀರಿಯಲ್ಲಿ ನಿರುದ್ಯೋಗ ಪ್ರಮಾಣ‌ಹೆಚ್ಚಳ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಆಗಿದ್ದು ನಿರುದ್ಯೋಗ ಪ್ರಮಾಣದಲ್ಲಿ‌ಎಂದೂ ಕಂಡು ಕೇಳರಿಯದ ಹೆಚ್ಚಳ! ಎಂದು ಕಾಂಗ್ರೆಸ್ ಟೀಕಾಪ್ರಹಾರ ಮಾಡಿದೆ.

2024-25 ರ ಬಜೆಟ್‌ನಲ್ಲಿ ಯುವ ಸಮುದಾಯಕ್ಕೆ ಪ್ರತಿಷ್ಠಿತ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ನೀಡುವುದಾಗಿ ಘೋಷಿಸಲಾಗಿತ್ತು. ಆ ಮಾತನ್ನೂ ಮೋದಿ ಸರ್ಕಾರ ಉಳಿಸಿಕೊಳ್ಳಲಿಲ್ಲ ಕಾಂಗ್ರೆಸ್ ಆರೋಪಿಸಿದೆ.

ಈಗ ನಿರುದ್ಯೋಗದಿಂದ ತತ್ತರಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವವರನ್ನು ಕೇಂದ್ರ ಸರ್ಕಾರದ ಹೆಸರಿನಲ್ಲಿ ವಂಚಕರ ಗುಂಪೊಂದು ಉದ್ಯೋಗ ಕೊಡುವುದಾಗಿ ಹೇಳಿಕೊಂಡು ಹಣಸುಲಿಯುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಕೇಂದ್ರ ಸರ್ಕಾರ ಈ ವಂಚಕರ ಜಾಲದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದೆ! ಎಂದು ಕಾಂಗ್ರೆಸ್ ಆರೋಪಿಸಿದೆ.

 

 

Share This Article
error: Content is protected !!
";