ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಸೆ.07ರಂದು ನಗರದ ಗಾರ್ಡನ್ ಏರಿಯಾ 2ನೇ ಕ್ರಾಸ್ ಸೂರ್ಯ ನರ್ಸಿಂಗ್ ಕಾಲೇಜ್ ಪಕ್ಕದ ಕನ್ಸರವೆನ್ಸಿ ರಸ್ತೆ ಒಳಚರಂಡಿಯಲ್ಲಿ ಸುಮಾರು 45-50 ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈತನ ವಿಳಾಸ, ಹೆಸರು, ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ.
ಈತನ ಚಹರೆ ಸುಮಾರು 05.06 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೈಮೇಲೆ ಕಪ್ಪು ಬಣ್ಣದ ಚಡ್ಡಿ ಇರುತ್ತದೆ. ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ನ್ನು ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.