ಬಲಗೈಯಲ್ಲಿ UMESH ಮತ್ತು REESHA ಎಂಬ ಅಚ್ಚೆ ಗುರುತು ಇರುವ ಅಪರಿಚಿತ ಶವ ಪತ್ತೆ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿ ಕೊಪ್ಪಗೇಟ್ ಬಳಿ ಪ್ರಯಾಣಿಕರ ತಂಗುದಾಣದಲ್ಲಿ ಸುಮಾರು ೩೫ ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತನು ೧೭೫ ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಬಲಗೈಯಲ್ಲಿ ಇಂಗ್ಲೀಷ್ ಅಕ್ಷರದಲ್ಲಿ UMESH ಎಂದು ಮತ್ತು ಬಲಗೈಯಲ್ಲಿ REESHA ಎಂಬ ಅಚ್ಚೆ ಗುರುತು ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 08131-222229, ಮೊ.ಸಂ. 9480802959-35-21ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್‌ಪೆಕ್ಟರ್ ಮನವಿ ಮಾಡಿದ್ದಾರೆ.