ಕೇಂದ್ರ ಸಚಿವ ಕುಮಾರಸ್ವಾಮಿ ಪತ್ನಿ ಅನಿತಾರೊಂದಿಗೆ ಈಶಾನ್ಯ ರಾಜ್ಯಗಳ ದೇವಸ್ಥಾನಗಳಿಗೆ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಈಶಾನ್ಯ ರಾಜ್ಯಗಳ ಭೇಟಿಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇವತ್ತು ಬೆಳಗ್ಗೆ ಅರುಣಾಚಲ ಪ್ರದೇಶದ ಜೀರೊ ಪ್ರದೇಶದಲ್ಲಿ ಕರಡೋ ಎಂಬಲ್ಲಿರುವ ಶ್ರೀ ಸಿದ್ದೇಶ್ವರನಾಥ ದೇವಾಲಯಕ್ಕೆ ತೆರಳಿ ಆ ಪರಮಶಿವನಿಗೆ ಪೂಜೆ ಸಲ್ಲಿಸಿದರು. 

 ಈ ಸಂದರ್ಭದಲ್ಲಿ ದೇಗುಲದ ಬಳಿ ಕನ್ನಡಿಗರೂ ಸೇರಿದಂತೆ ತೆಲುಗು, ತಮಿಳು, ಮಲೆಯಾಳಿ ರಾಜ್ಯಗಳ ಜನರು ಸೇರಿ ದೇಶದ ಹಲವಾರು ಭಾಷಿಕರನ್ನು ಭೇಟಿಯಾಗಿದ್ದು ನಿಜಕ್ಕೂ ಜೀವನದ ಸುದೈವ.

ಅವರೆಲ್ಲರೂ ತೋರಿದ ಆದರಾಭಿಮಾನಕ್ಕೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವ ಹೆಚ್.ಡಿ.ಕುಮಾರಸ್ವಾಮಿ ಜೊತೆಯಲ್ಲಿ ಪತ್ನಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರು.

 

 

- Advertisement -  - Advertisement - 
Share This Article
error: Content is protected !!
";