ಚಂದ್ರವಳ್ಳಿ ನ್ಯೂಸ್, ಹಾಸನ:
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಶ್ರೀ ಹಾಸನಾಂಬೆ ಅಮ್ಮನವರ ದರ್ಶನವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ, ಸೊಸೆ ರೇವತಿ ನಿಖಿಲ್ ಅವರೊಂದಿಗೆ ಆಗಮಿಸಿ ಪಡೆದುಕೊಂಡರು.
ಹಾಸನದ ಶ್ರೀ ಹಾಸನಾಂಬೆ ದೇವಾಲಯದ ಪ್ರಾಂಗಣದಲ್ಲಿರುವ ಶ್ರೀ ಸಿದ್ದೇಶ್ವರ ದೇವರ ದರ್ಶನ ಮಾಡಿದರು.
ಜಗನ್ಮಾತೆ ಆ ತಾಯಿಯ ಅನುಗ್ರಹ, ಕರುಣೆ ಎಲ್ಲರ ಮೇಲೆಯೂ ಇರಲಿ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಪ್ರಾರ್ಥಿಸಿದರು.