ಸಿ.ಎಸ್.ಸಿ ಮೊಬೈಲ್ ವ್ಯಾನ್ ಗೆ ಹಸಿರು ನಿಶಾನೆ ತೋರಿದ ಕೇಂದ್ರ ಸಚಿವ ಸೋಮಣ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರಿನ ಸಂಸದರ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ಸಿ.ಎಸ್.ಸಿ ಮೊಬೈಲ್ ವ್ಯಾನ್ ಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದರು.

ಈ ಮೊಬೈಲ್ ವ್ಯಾನ್ ಜಿಲ್ಲೆಯ ಜನರಿಗೆ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಸೇವೆಗಳನ್ನು ಒದಗಿಸುತ್ತದೆ. ವ್ಯವಸ್ಥೆ ಮತ್ತು ಬ್ಯಾಂಕಿಂಗ್, ವಿಮೆ, ಡಿಜಿಪೇ ಮೈಕ್ರೋ ಎಟಿಎಂ, ಆಯುಷ್ಮಾನ್ ಭಾರತ್, ಇ-ಶ್ರಮ್, ಪಿಎಂಕಿಸಾನ್, ಇ-ಕೆವೈಸಿ ಮತ್ತು ಇತರ ಸೇವೆಗಳು ಸೇರಿದಂತೆ ಜನರಿಗೆ ವಿವಿಧ ಆನ್ ಲೈನ್ ಸೇವೆಗಳನ್ನು ಒದಗಿಸುತ್ತದೆ.

- Advertisement - 

ಮೂಲಭೂತ ಡಿಟಿಟಲ್ ಮತ್ತು ಆರ್ಥಿಕ ಸಾಕ್ಷರತಾ ಕೌಶಲ್ಯಗಳ ಕುರಿತು ಜ್ಞಾನ ಮತ್ತು ತರಬೇತಿಯನ್ನು ನೀಡುವ ಮೂಲಕ ವ್ಯಾನ್ ಜಿಲ್ಲೆಯಾದ್ಯಂತ ವಿವಿಧ ಪಂಚಾಯತ್ ಗಳಿಗೆ ಪ್ರಯಾಣಿಸಲಿದೆ. ಸಾರ್ವಜನಿಕರು ಈ ಸೇವೆಯ ಸಂಪೂರ್ಣ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೇಂದ್ರ ಸಚಿವರು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.

 

- Advertisement - 

Share This Article
error: Content is protected !!
";