ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸುದಿನದಂದು ಹಾಸನದ ಐತಿಹಾಸಕ ಸ್ಥಳವಾದ ಹಳೇಬೀಡಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಸಾರ್ವಜನಿಕರೊಂದಿಗೆ ಯೋಗ ಮಾಡಲಾಯಿತು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಬೇಲೂರು ಶಾಸಕ ಹೆಚ್.ಕೆ ಸುರೇಶ್, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ವರ, ಜೆಎಂಎಫ್‘ಸಿಯ ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಶಶಿಕಲಾ, ಅಧಿಕಾರಿಗಳಾದ ಶಾಂತಲಾ, ಡಾ.ಶ್ರುತಿ, ಬೇಲೂರು ತಹಶೀಲ್ದಾರ್ತಿ ಮಮತಾ, ಯೋಗ ಗುರುಗಳಾದ ಸುಬ್ರಮಣ್ಯ, ರಂಗಸ್ವಾಮಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಧು ಅವರು ಸೇರಿದಂತೆ ಇನ್ನಿತರೆ ಪ್ರಮುಖ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

