ಅಟ್ಲಾಂಟಿಕ್​ ಮಹಾ ಸಾಗರದಲ್ಲಿ ಏಕಾಂಗಿಯಾಗಿ ಸಾಧನೆ ಮಾಡಿದ ಅನನ್ಯ ಪ್ರಸಾದ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಟ್ಲಾಂಟಿಕ್ ಮಹಾಸಾಗರವನ್ನ ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ನಮ್ಮ ಬೆಂಗಳೂರು ಮೂಲದ ಅನನ್ಯ ಪ್ರಸಾದ್ ಅವರ ಸಾಧನೆ ಇಡೀ ದೇಶ ಹೆಮ್ಮೆಪಡುವಂತದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement - 

 ಈ ಸಾಧನೆಯ ಶಿಖರವನ್ನೇರಿದ ಯುವತಿ ಕನ್ನಡದ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಎನ್ನುವುದು ಇನ್ನಷ್ಟು ಖುಷಿಯ ವಿಷಯ ಎಂದು ಅವರು ತಿಳಿಸಿದ್ದಾರೆ.

- Advertisement - 

ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ – ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್‌ಗೆ ಅಭಿನಂದನೆಗಳು. ಇಂತಹ ನಿಸ್ವಾರ್ಥ ಆಲೋಚನೆಗಳು ನಿಮ್ಮನ್ನು ಜೀವನದಲ್ಲಿ ಮತ್ತಷ್ಟು ಎತ್ತರೆತ್ತರಕ್ಕೆ ಕೊಂಡೊಯ್ಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.

ಅನನ್ಯ ಪ್ರಸಾದ್ ಯಾರು​?
ಬೆಂಗಳೂರಿನ ಮೂಲದವರಾದ ಅನನ್ಯ ಪ್ರಸಾದ್​ ಇಂಗ್ಲೆಂಡ್​ನ ಶೆಫಿಲ್ಡ್​ನಲ್ಲಿ ನೆಲೆಸಿದ್ದಾರೆ. ಇವರು ಕವಿ ಜಿಎಸ್​ ಶಿವರುದ್ರಪ್ಪ ಅವರ ಪುತ್ರ ಶಿವಪ್ರಸಾದ್ ಅವರ ಪುತ್ರಿ.
ಅನನ್ಯ ಪ್ರಸಾದ್ ಅವರು ಅಟ್ಲಾಂಟಿಕ್​ ಮಹಾಸಾಗರದಲ್ಲಿ ಏಕಾಂಗಿಯಾಗಿ ಐದು ಸಾವಿರ ಕಿಮೀ ದೂರುವನ್ನು ಹಾಯಿದೋಣಿ ಮೂಲಕ ಕ್ರಮಿಸಿ ವಿಶ್ವಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.

- Advertisement - 

 

 

Share This Article
error: Content is protected !!
";