ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ “ಸಾಂಸ್ಕೃತಿಕ ಕಲಾ ವೈಭವ ಉತ್ಸವಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ ಹೆಚ್ ಜಿ ವಿಜಯಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಸೂರ್ಯ ಕಾಲೇಜಿನ ವಿದ್ಯಾರ್ಥಿಗಳು ಭಾರತದ ವಿವಿಧ ರಾಜ್ಯಗಳ ಆಗಮಿಸಿ ಅ ರಾಜ್ಯದ ಅಚಾರ ವಿಚಾರದ ಬಗ್ಗೆ ಸಂಸ್ಕೃತಿ ಉಡುಗೆ ತೊಡುಗೆ ಆಹಾರ ಪದ್ದತಿ ಇವುಗಳನ್ನು ಪ್ರಾತ್ಯೆಕ್ಷೀಕವಾಗಿ ನಡೆಸಿಕೊಟ್ಟರು.
ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ತಮ್ಮದೆ ಅದ ಅಚಾರ ವಿಚಾರ ಸಂಪ್ರದಾಯ ಅಹಾರ ಪದ್ದತಿ ಹಾಗು ವೈವಿದ್ಯತೆ ಕಲೆ ಸಂಸ್ಕೃತಿ ನೃತ್ಯ ರೂಪಕವಾಗಿ ನೆಡೆಸಿಕೊಟ್ಟರು. ಕರ್ನಾಟಕದ ಸಾಂಸ್ಕೃತಿ ಗತವೈಭವದ ಬಗ್ಗೆ ವೈಭವವನ್ನು ನೃತ್ಯದ ಮೂಲಕ ತೊರಿಸಿ ಕೊಟ್ಟರು.
ಭಾರತ ವಿವಿಧತೆಯ ಏಕತೆಯನ್ನು ಸಾಧಿಸುವ ದೇಶ ಎಂದು ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಧರ್ಮ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುವ ಇಂತಹ ಸಂದರ್ಭದಲ್ಲಿ ನಮ್ಮ ಕಾಲೇಜಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಹ ಪಶ್ಚಿಮ ಬಂಗಾಳ ದುರ್ಗಾ ಪೂಜೆ ಮಹತ್ವವನ್ನು ಮತ್ತು
ಕೇರಳದ ಓಣಂ ಹಬ್ಬದ ಆಚರಣೆ ಒಟ್ಟಿಗೆ ಸೇರಿ ಮಾಡಿರುವುದು “ಕುವೆಂಪು ರವರ ಸರ್ವಜನಾಂಗದ ಶಾಂತಿಯ ತೋಟ”ಕರ್ನಾಟಕ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದು ತುಂಬಾ ಸಂತಸ ತಂದಿದೆ ಎಂದು ಡಾ ಹೆಚ್ ಜಿ ವಿಜಯಕುಮಾರ್ ಹೆಮ್ಮೆಯನ್ನು ವ್ಯಕ್ತಪಡಿಸಿದರು .ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ನೃತ್ಯ ರೂಪಕದಲ್ಲಿ ಪ್ರಚುರಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ ಸಿ ಮಂಜುನಾಥ್ ಕಲಾ ಉತ್ಸವದ ಅ ಯೋಜಕ ಉಮ್ಮೆ ಮುಸ್ಕಾನ್ ಉಪನ್ಯಾಸಕರಾದ ಪುನೀತ್ ಟಿ. ಪಲ್ಲವಿ ಎಸ್ ಸೌಮ್ಯ ಶ್ರೀ ಕೆ ವಿ. ನೇತ್ರಾವತಿ. ಮೋಹನ್ ಕುಮಾರ್. ಜಿತೇಂದ್ರ. ಲಾವಣ್ಯ. ಶಾರದಾ ಬೋಧಕೇತರ ಸಿಬ್ಬಂದಿಗಳಾದ ಮಿಥುನ್ ಗಂಗಾಧರ್ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.