ಅಭಿವೃದ್ಧಿ ಕೆಲಸ ಮಾಡದೇ ರಾಜ್ಯದ ಜನತೆಗೆ ಅನ್ಯಾಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಗಡಿ ಮುಖ್ಯರಸ್ತೆಯಲ್ಲಿರುವ ತಾವರೆಕೆರೆಯ ಅತಿಥಿ ಗಾರ್ಡೇನಿಯಾ ಮುಂಭಾಗದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ ಹಾಗೂ ಪಕ್ಷದ ಮುಖಂಡರು, ಹಿರಿಯ ಕಾರ್ಯಕರ್ತರೊಂದಿಗೆ ಉದ್ಘಾಟಿಸಿ, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

2.5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ” ಉಸಿರಾಡುವ ಗಾಳಿಯನ್ನು ” ಹೊರತುಪಡಿಸಿ ಉಳಿದ ಪ್ರತಿಯೊಂದಕ್ಕೂ ತೆರಿಗೆ ಮೇಲೆ ತೆರಿಗೆ ಹಾಕುವ ಮೂಲಕ ರಾಜ್ಯದ ಜನತೆಯನ್ನು ಕಿತ್ತು ತಿನ್ನುತ್ತಿದೆ. 10 ರೂ.ಗಳ ಅಭಿವೃದ್ಧಿ ಕೆಲಸ ಮಾಡದೇ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಡವರ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಲಾಯತು.

- Advertisement - 

ಅಲ್ಲದೇ, ರಾಮನಗರ ಜಿಲ್ಲೆಯಲ್ಲಿ ರೈತರಿಗೆ ಮಾಡುತ್ತಿರುವ ಅನ್ಯಾಯ, ಕಲ್ಯಾಣ ಕರ್ನಾಟಕ, ಮಳೆನಾಡು ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ಹಾಗೂ ಸಂತ್ರಸ್ತರ ಅಳಲನ್ನು ಕೇಳದೆ ನಿದ್ರೆಗೆ ಜಾರಿರುವ ಸರ್ಕಾರವನ್ನು ನಾವೆಲ್ಲರೂ ಬಡಿದೆಬ್ಬಿಸೋಣ. ಮುಂಬರುವ ದಿನಗಳಲ್ಲಿ ಬಡವರರು, ರೈತಪರ. ಯುವಕರ ಪರ ಸರ್ಕಾರದ ರಚನೆ ಮಾಡಲು ತಾವೆಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಇದೇ ವೇಳೆ ಜೆಡಿಎಸ್ ಪಕ್ಷವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ 9964002028 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿಸುವ ಮೂಲಕ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಲು ಮುಖಂಡರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಮನವಿ ಮಾಡಲಾಯಿತು.

- Advertisement - 

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಡಾ. ಕೆ. ಅನ್ನಧಾನಿ, ಮಾಜಿ ವಿಧಾನಪರಿಷತ್ ಸದಸ್ಯರು, ಹಿರಿಯರಾದ ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರಾದ  ಶರವಣ, ವಿವೇಕಾನಂದ, ಮಾಜಿ ವಿಧಾನಪರಿಷತ್ ಸದಸ್ಯರಾದ ಎಸ್.ಎಂ‌. ರಮೇಶ್ ಗೌಡ, ಗೊವಿಂದರಾಜು, ಮುಖಂಡರಾದ ಜಗದೀಶ್, ಎ.ಪಿ. ರಂಗನಾಥ್, ಶಂಕರೇಗೌಡ, ಶೈಲಜಾ ರಾವ್, ಸಾಕಮ್ಮ, ಹನಮಂತೆಗೌಡ, ಮುತ್ತಣ್ಣ, ಚಂದ್ರಪ್ಪ, ಕೆಂಪಣ್ಣ, ಮೂರ್ತೆಪ್ಪ, ಕಲ್ಯಾಣ ಬಾಬು, ಗಂಗಣ್ಣ, ಬೆಟ್ಟಪ್ಪಣ್ಣ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

Share This Article
error: Content is protected !!
";