ಅವೈಜ್ಞಾನಿಕ ಜಾತಿ ಜನಗಣತಿ-ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2017-18 ರ ರಾಜ್ಯ ಸರ್ಕಾರದ ಆಡಳಿತದಲ್ಲಿ ಜಾತಿ ಜನಗಣತಿ ಮಾಹಿತಿ ಸಂಗ್ರಹಿಸಲು ಒಂದು ಮಹತ್ವದ ವೇದಿಕೆ ಸಿದ್ಧ ಪಡಿಸಲಾಯಿತು ಆ ಒಂದು ಮಹತ್ವದ ವಿಷಯ ಉತ್ತಮವಾದುದೇ.

- Advertisement - 

ಈ ಜಾತಿ ಜನಗಣತಿ ಮಾಹಿತಿ ಸಂಗ್ರಹಿಸಲು ಸರ್ಕಾರ 180 ಕೋಟಿಗೂ ಹೆಚ್ಚು ಹಣವನ್ನು ವ್ಯಯ ಮಾಡಿದೆ. ಜಾತಿ ಜನಗಣತಿ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಹಾಗೂ ಇನ್ನು ಇತರೇ ಇಲಾಖೆಯ ನೌಕರರನ್ನು ಬಳಸಲಾಗಿದೆ ಈ ವಿಚಾರವನ್ನು ಆ ದಿನಗಳಲ್ಲಿ ನಾನು ಅರಿತಿದ್ದೇನೆ.

- Advertisement - 

 ಜಾತಿ ಜನಗಣತಿ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಮನೆಯ ಒಟ್ಟು ಸದಸ್ಯರ ಸಂಖ್ಯೆ. ಗಂಡು ಹೆಣ್ಣಿನ ಸದಸ್ಯರ ಸಂಖ್ಯೆ. ಉದ್ಯೋಗ. ವರಮಾನ ಹಾಗೂ ಜಾತಿ ವಿವರವನ್ನು ಪಡೆದು ಅವುಗಳನ್ನು ನೋಂದಾಯಿಸಲಾಗಿದೆ.

 ಲೋಪದೋಷಗಳ ಕಾರ್ಮೋಡಗಳ ಸುಳಿಯಲ್ಲಿ ಜಾತಿ ಜನಗಣತಿ ಸಿಕ್ಕಿಕೊಂಡ ವಿಚಾರ ಬೆಳಕಿಗೆ ಬಂದಿದೆ ಈ ವಿಚಾರವನ್ನು ಸ್ವತಹ ನಾನು ಕಣ್ಣಾರೆ ಕಂಡಿದ್ದೇನೆ ಎಂಬುದನ್ನು ಈ ಸಂದರ್ಭದಲ್ಲಿ ವಿವರಿಸುತ್ತಿರುವೆ. ಮನೆಮನೆಗೆ ಜಾತಿ ಜನಗಣತಿ ನೋಂದಾಯಿಸಲು ಬಂದವರು ಜಾತಿ ಜನಗಣತಿ ಅರ್ಜಿಯನ್ನು ತುಂಬುವ ಸಂದರ್ಭದಲ್ಲಿ ಜಾತಿ ಹೆಸರಿನ ಮುಂದೆ ಉಪಜಾತಿಗಳ ಹೆಸರನ್ನು ನೋಂದಾಯಿಸಿರುವ ವಿಚಾರ ಬೆಳಕಿಗೆ ಬಂದಿದೆ . 

- Advertisement - 

ಜಾತಿ ವಿಚಾರದ ಮುಂದೆ ಜಾತಿ ಹೆಸರನ್ನು ಬರೆಯಬೇಕು ಉಪ=ಪಂಗಡದ ಹೆಸರು ಬರೆಯಬಾರದು. ಈ ವಿಚಾರದಲ್ಲಿ ನೋಂದಣಿಕೆಗೆ ಬಂದವರು ತಪ್ಪು ಮಾಡುತ್ತಿದ್ದರು ಈ ವಿಚಾರವನ್ನು ನೋಂದಣಿಕೆಗೆ ಬಂದವರಲ್ಲಿ ಮನವರಿಕೆ ಮಾಡಿದ್ದರೆ ಅವರಲ್ಲಿ ಅಸಡ್ಡೆ ಕಾಣುತ್ತಿತ್ತು , ಈ ವಿಚಾರ ಒಂದು ಕುತಂತ್ರ ಎಂಬಂತೆ ಕಂಡಿರುವ ವಿಚಾರ ನನಗೆ ಆ ಸಂದರ್ಭದಲ್ಲಿ ಅನಿಸಿದ್ದು ಸುಳ್ಳಲ್ಲ ನನ್ನಂತೆ ಲಕ್ಷಾಂತರ ಜನರಿಗೆ ಮನವರಿಕೆ ಯಾಗಿದ್ದೆ.

ಆ ದಿನಗಳಲ್ಲಿ ಈ ಸುದ್ದಿ ಸಣ್ಣದಾಗಿ ಸುದ್ದಿಯು ಆಗಿದೆ. ಈ ವಿಚಾರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಾಂತ್ಯದಲ್ಲಿ ಹೋಬಳಿ ಮಟ್ಟದಲ್ಲಿ ಸಭೆಯನ್ನು ಮಾಡಲು ಮುಖಂಡರಿಗೆ ಮನವಿಯನ್ನು ನಾನು ಮಾಡಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಆ ಸಂದರ್ಭದಲ್ಲಿ ತೇಲಿಬಂದಿದ್ದು ನಿಜ.

ರಾಜ್ಯದಲ್ಲಿ ಜಾತಿ ಜನಗಣತಿ ಪ್ರಕಾರ ಜನಸಂಖ್ಯೆ ಕ್ರೋಢಿಕರಣ ವಿಚಾರದಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರ ಒಕ್ಕೂಟ ವ್ಯವಸ್ಥೆ ಸೇರಿದಂತೆ ಇನ್ನು ಕೆಲವು ಜಾತಿಗಳನ್ನು ಉಪ ಪಂಗಡಗಳ ಹೆಸರಿನಲ್ಲಿ ವಿಂಗಡನೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ವಿಚಾರ ಒಡೆದು ಆಳುವ ನೀತಿ ಎಂಬಂತೆ ಕಂಡುಬರುತ್ತಿದೆ. ಈ ವಿಚಾರವನ್ನು ಜನಾಂಗದ ಸಂಘಟನೆಯ ಪದಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರುಗಳು ಸೇರಿದಂತೆ  ಪ್ರಜ್ಞಾವಂತ ನಾಗರಿಕರ ಸಮಾಜ ಖಂಡಿಸುತ್ತಿದ್ದಾರೇ.

ಜಾತಿ ಜನಗಣತಿ ತಪ್ಪಲ್ಲ ಆದರೆ ದೊಡ್ಡ ಪ್ರಮಾಣದಲ್ಲಿರುವ ಜಾತಿಗಳನ್ನು ಉಪ ಪಂಗಡಗಳ ಹೆಸರಿನಲ್ಲಿ ವಿಂಗಡನೆ ಮಾಡಲಾಗಿರುವ ವಿಚಾರ ತಪ್ಪಾಗಿದೆ.

ಈ ವಿಚಾರವನ್ನು ಸರಿಪಡಿಸಲು ಮತ್ತೊಮ್ಮೆ ಹೊಸದಾಗಿ ಜಾತಿ ಜನಗಣತಿ ಮಾಡಲು ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಗುರುವರ್ಯರುಗಳು ಸೇರಿದಂತೆ ಅನ್ಯಾಯಕ್ಕೆ ಒಳಗಾದ ಇನ್ನು ಕೆಲವು ಸಮುದಾಯದ ಮುಖಂಡತ್ವದ ಮುನ್ನೆಲೆಯಲ್ಲಿ ಹಾಗೂ ರಾಜ್ಯದ ಸಮಸ್ತ ಜನತೆಯ ಬೆಂಬಲದೊಂದಿಗೆ ಸರ್ಕಾರಕ್ಕೆ ಮನವಿಯನ್ನು  ಮಾಡಬೇಕಿದೆ.

 ಕುಲ=ಕುಲ=ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆ ಏನೆಂದು ಬಲ್ಲಿರಾ ಬಲ್ಲಿರಾ ಎಂಬ ಮಹತ್ವದ ವಿಚಾರವನ್ನು ಕನಕದಾಸರು ಐದುನೂರು ವರ್ಷಗಳ ಹಿಂದೆಯೇ ಮಾನವೀಯ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟಿರುವರು.

ಕಿರು ಲೇಖನ-ರಘು ಗೌಡ 9916101265

 

Share This Article
error: Content is protected !!
";