ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕಣಜನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿರುವ ಹೈ ಮಾಸ್ಟ್ ವಿದ್ಯುತ್ ದೀಪವು ಕಳೆದ 6-7 ತಿಂಗಳುಗಳಿಂದ ಹೊತ್ತಿ ಉರಿಯದೆ ಕಾಲೋನಿಯ ಜನರು ಹಿಡಿ ಶಾಪವಾಕುವಂತಾಗಿದೆ.
ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅಭಿವೃದ್ಧಿ ಮಾಡುತ್ತಿದ್ದರೆ ಪಿಡಿಒ ಅಧಿಕಾರಿಗಳ ಅಸಡ್ಡೆಯಿಂದ ಕಾಲೋನಿಯ ಜನರು ಇದರ ಪ್ರಯೋಜನದಿಂದ ವಂಚಿತರಾಗಿದ್ದಾರೆ ಎಂದು ದಲಿತ ಮುಖಂಡ ದುಶ್ಯಾಂಝಾಥ ಆರೋಪಿಸಿದ್ದಾರೆ.

ಈ ಕೂಡಲೇ ಬಂದು ಹೈಮಾಸ್ಟ್ ಬೀದಿ ದೀಪ ಉದ್ಘಾಟನೆ ಮಾಡದೇ ಹೋದರೆ, ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

