ಡಾ.ಅಂಬೇಡ್ಕರ್ ರವರ ಪುತ್ಥಳಿ ಅನಾವರಣ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ವಡ್ಡರಪಾಳ್ಯದಲ್ಲಿ ಸ್ಥಳೀಯ ಯುವಕರು ಹಾಗೂ ನಿವಾಸಿಗಳು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿಯ ಅಂಗವಾಗಿ ಪುತ್ಥಳಿ ಅನಾವರಣ  ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.

 ಕಾರ್ಯಕ್ರಮಕ್ಕೆ ಆಗಮಿಸಿದ  ಕೆ ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ , ದಲಿತ ಮುಖಂಡರಾದ ರಾಜಗೋಪಾಲ್,ರಾಜುಸಣ್ಣಕ್ಕಿ,ಸ್ಥಳೀಯ ಮುಖಂಡ ಮಹೇಶ್ ಸೇರಿದಂತೆ ಹಲವು ಗಣ್ಯರು  ನೂತನ ಪುತ್ಥಳಿಗೆ ಪುಷ್ಪ ನಮನ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಅನಾವರಣ ಮಾಡಿದರು.

  ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ  ಮಹೇಶ್ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿ, ಅವರ ಜೀವನವೇ ನಮಗೆ ಆದರ್ಶ, ಹಲವು ಹೋರಾಟಗಳ ನಡುವೆಯೂ  ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ, ಅವರ ಆಶಯದಂತೆ  ವಿದ್ಯೆ ಸಂಘರ್ಷ ಸಮಾನತೆ ಸಾದಿಸುವ ನಿಟ್ಟಿನಲ್ಲಿ ಇಂದಿಗೂ ನಮ್ಮ ಹೋರಾಟ ನಿರಂತರವಾಗಿದೆ ಎಂದರು.

 ನಾವು ದೇವರ ಕುರಿತಂತೆ  ಹಲವಾರು ವಿಗ್ರಹಗಳನ್ನು ನೋಡಿದ್ದೇವೆ ಆದರೆ ನಮ್ಮ ಸಮಾನತೆಗಾಗಿ ಹೋರಾಡಿದ  ಬಾಬಾ ಸಾಹೇಬರೇ ನಮ್ಮ ದೇವರು , ಅವರ ಪ್ರತಿಬಿಂಬವನ್ನು ಮುಂದಿನ ಪೀಳಿಗೆಗೂ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು , ಈ ನಿಟ್ಟಿನಲ್ಲಿ  ನಮ್ಮ ವಡ್ಡರ ಪಾಳ್ಯದಲ್ಲಿ  ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ. ಇದು ಕೇವಲ  ಪುತ್ಥಳಿಯಲ್ಲ ವಿದ್ಯೆ ಸಂಘರ್ಷ ಹೋರಾಟ ಸಮಾನತೆಯ ಪ್ರತಿರೂಪವಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮಹೇಶ, ಕೇಶವ್, ಕಿರಣ, ಬಾಲಕೃಷ್ಣ, ಪ್ರಜ್ವಲ್, ಅಭಿ, ಕಿರಣ ಎಸ್, ಮಹೇಶ್, ಪ್ರದೀಪ್ ನವೀನ್ ಸುರೇಶ್, ಮುರಳಿ, ನರಸಿಂಹ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

 

Share This Article
error: Content is protected !!
";