ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಉಪಾಧ್ಯಾಯ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :

ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ- ಆಪರೇಟಿವ್ ಬ್ಯಾಂಕಿನ ೨೦೨೪ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಉಮಾಶಂಕರ ಉಪಾಧ್ಯಾಯ ಉಪಾಧ್ಯಕ್ಷರಾಗಿ ಎಸ್ ಪಿ ಶೇಷಾದ್ರಿ ಖಜಾಂಚಿಯಾಗಿ ಜಿ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವರ ನಡೆದ ಚುನಾವಣೆಯಲ್ಲಿ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಹಾಗೂ ಚುನಾವಣಾಧಿಕಾರಿ ಶ್ರೀನಿವಾಸ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ನಿಕಟಪೂರ್ವ ಪದಾಧಿಕಾರಿಗಳಾದ ಎಂ ಕೆ ಸುರೇಶ್ ಕುಮಾರ್, ಕೆ ರಂಗನಾಥ್, ರುಕ್ಮಿಣಿ ವೇದ ವ್ಯಾಸ, ಬ್ಯಾಂಕಿನ ನಿರ್ದೇಶಕರಾದ ಸಿ ಹೊನ್ನಪ್ಪ, ರೇಖಾ ಚಂದ್ರಶೇಖರ್, ರಾಜು, ಘನ ಶ್ಯಾಮ್, ಉಮೇಶ್ ಪುಟ್ಟಪ್ಪ, ಎಂ ರಾಕೇಶ್, ರಘುವೀರ್ ಸಿಂಗ್, ಸೀತಾರಾಮ್ ನಾಯಕ, ನವೀನ ದಳವಾಯಿ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮನೋಜ್‌ಕುಮಾರ್ ಇದ್ದರು.

  

- Advertisement -  - Advertisement - 
Share This Article
error: Content is protected !!
";