ಯುಪಿಎಸ್ ಸಿ ಮುಖ್ಯ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂ.ಗ್ರಾ.ಜಿಲ್ಲೆ.:
 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ  2025-26ನೇ ಸಾಲಿಗೆ ಯು.ಪಿ.ಎಸ್.ಸಿ ಮುಖ್ಯ ಪರೀಕ್ಷಾ ಪೂರ್ವ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

- Advertisement - 

ತರಬೇತಿ ಅವಧಿ 3 ತಿಂಗಳು ಆಗಿದ್ದು, ಬೆಂಗಳೂರಿನ ಹಜ್ ಭವನದಲ್ಲಿ ವಸತಿಯುತ ತರಬೇತಿ ಅಥವಾ ಶಿಷ್ಯ ವೇತನದೊಂದಿಗೆ ಬೆಂಗಳೂರು ಹೊರತು ಪಡಿಸಿ ಪ್ರತಿಷ್ಠಿತ ಸಂಸ್ಥೆಯ ಮೂಲಕ ತರಬೇತಿಯನ್ನು ನೀಡಲಾಗುವುದು.

- Advertisement - 

ಅರ್ಜಿ ಸಲ್ಲಿಸಲು https://dom.karnataka.gov.in ವೆಬ್ಸೈಟ್ ಅಥವಾ ಅಲ್ಪಸಂಖ್ಯಾತರ ನಿರ್ದೇಶನಾಲಯ, ನಂ 16ಸಿ, ಮಿಲ್ಲರ್ಸ್ ಟ್ಯಾಂಕ್ ಬೆಡ್ ರಸ್ತೆ, ವಸಂತ ನಗರ, ಬೆಂಗಳೂರು 560052 ಗೆ ಕಳುಹಿಸಬಹುದಾಗಿದೆ. ಜೂನ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು 21 ರಿಂದ 35 ವರ್ಷ ಒಳಗಿನವರಾಗಿರಬೇಕು. ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು ರಾಜ್ಯದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು ಹಾಗೂ ಯು.ಪಿ.ಎಸ್.ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

- Advertisement - 

ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ: 8277799990 ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";