ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೇರಿಕಾದ ಭಾರತೀಯರಿಗೆ ಮೋದಿಯ ಪೌರತ್ವ ತಿದ್ದುಪಡಿ ಕಾಯ್ದೆ ದೊಡ್ಡ ಸಮಸ್ಯೆ ಎದುರಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಸುಖಾ ಸುಮ್ಮನೆ ಭಾರತದಲ್ಲಿ CAA & NRC ಕಾಯ್ದೆ ಜಾರಿಗೆ ತರಲು ಹೊರಟಿದ್ದ ಮೋದಿಗೆ ವಿಶ್ವದ ದೊಡ್ಡಣ್ಣ ಟಕ್ಕರ್ ಕೊಟ್ಟಿದೆ.
ಇದರ ಪರಿಣಾಮ ಬದುಕು ಕಟ್ಟಿಕೊಳ್ಳಲು ಭಾರತದಿಂದ ವಲಸೆ ಹೋದ ಸಾವಿರಾರು ಭಾರತೀಯರನ್ನು ಅಮೇರಿಕಾ ಗಡಿಪಾರು ಮಾಡುತ್ತಿದೆ! ಎಂದು ಕಾಂಗ್ರೆಸ್ ಆರೋಪಿಸಿದೆ.
ಅಮೇರಿಕಾ ಅಲ್ಲಿನ ಭಾರತೀಯರನ್ನು ಸೇನಾ ವಿಮಾನದ ಮೂಲಕ ಸಂಕೋಲೆಯಲ್ಲಿ ಬಂಧಿಸಿ ಭಾರತಕ್ಕೆ ಹಿಂದಕ್ಕೆ ಕಳುಹಿಸಿದೆ. ಇದು ಪ್ರತಿಯೊಬ್ಬ ಭಾರತೀಯ ಮತ್ತು ಭಾರತ ದೇಶಕ್ಕೆ ಮಾಡಿದ ಅವಮಾನ.
ಅಮೆರಿಕಾ ಭಾರತೀಯರನ್ನು ಗಡೀಪಾರು ಮಾಡಿರುವ ಬಗ್ಗೆ ಹಾಗೂ ನಮ್ಮ ನೆಲದಲ್ಲಿ ಮಿಲಿಟರಿ ವಿಮಾನವನ್ನು ಇಳಿಸುವ ಬದಲು ಗೌರವದಿಂದ ಭಾರತೀಯರನ್ನು ಮರಳಿ ಕರೆತರಲು ನಮ್ಮದೇ ವಿಮಾನವನ್ನು ಏಕೆ ಕಳುಹಿಸಲಿಲ್ಲ ಎಂಬ ಬಗ್ಗೆ ಮೋದಿ ಸರ್ಕಾರ ಭಾರತೀಯರಿಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹ ಮಾಡಿದೆ.
ಅಮೇರಿಕಾ ಸರ್ಕಾರ ಭಾರತೀಯ ನಾಗರಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದರೂ ಪ್ರಧಾನಿ ಮೋದಿಯವರು ಮೌನವಾಗಿರುವುದನ್ನು ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.