ಚಂದ್ರವಳ್ಳಿ ನ್ಯೂಸ್, ಕಾರವಾರ :
ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿ, ಎರಡೂ ಹುದ್ದೆಯ ಗೌರವಧನ ಪಡೆದುಕೊಂಡು ಸರಕಾರವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷೆ, ಉ.ಕ.ಜಿಲ್ಲಾ ಬಿಜೆಪಿ ಮಾಜಿ ಪ್ರದಾನ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಉಷಾ ರವೀಂದ್ರ ಹೆಗಡೆ ತಪ್ಪಿತಸ್ಥೆ ಎಂದು ಪ್ರಧಾನ ಜಿಲ್ಲಾ ಡಿ.ಎಸ್.ವಿಜಯಕುಮಾರ ತೀರ್ಪು ನೀಡಿದ್ದು, ಕಾರಾಗೃಹ ಸಜೆ ಮತ್ತು 5,000 ರು. ದಂಡವನ್ನು
ಮತ್ತು ಸತ್ರ ನ್ಯಾಯಾಧಿಶ ಒಂದು ವರ್ಷ ಸಾಧಾರಣ ವಿಧಿಸಿದ್ದಾರೆ.
ಇಬ್ರಾಹಿಂ ನಬೀಸಾಬ ಎನ್ನುವವರು ನೀಡಿದ ದೂರಿನ ಮೇರೆಗೆ ಕಾರವಾರದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭಾರತ ದಂಡ ಸಂಹಿಂತೆಯ ಕಲಂ 420 ಮತ್ತು 468 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ಕಲಂ 13(1)(ಸಿ) ಸಹಿತ 13(2)ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶರು, ಆರೋಪಿತಳನ್ನು ಭಾರತೀಯ ದಂಡ ಸಂಹಿಂತೆಯ ಕಲಂ 420ರ ಅಡಿಯಲ್ಲಿನ ಅಪರಾಧದಿಂದ ದೋಷ ಮುಕ್ತಳನ್ನಾಗಿಸಿ, ಆರೋಪದಿಂದ ಖುಲಾಸೆ ಮಾಡಿದ್ದಾರೆ. ಆದರೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಕಲಂ 13(1)(ಡಿ) ಸಹವಾಚಕ ಕಲಂ 13(2)ರಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿಂತೆಯ ಕಲಂ 468 ರ ಅಡಿಯಲ್ಲಿ ತಪ್ಪಿತಸ್ಥಳು ಎಂದು ತೀರ್ಮಾನಿಸಿದ್ದಾರೆ.
ಉಷಾ ರವೀಂದ್ರ ಹೆಗಡೆಯವರ ಜಾಮೀನು ಮುಚ್ಚಳಿಕೆಯನ್ನು ಮತ್ತು ಅವಳ ಜಾಮೀನುದಾರರ ಮುಚ್ಚಳಿಕೆಯನ್ನು ಈ ಮೂಲಕ ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.