ಉಷಾ ತವನಿಧಿ ಅವರಿಗೆ ಪಿಹೆಚ್‍ಡಿ ಪದವಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೆಂಗಳೂರು ಮಲ್ಲೇಶ್ವರಂನ ಎಂಎಲ್ ಪಿಯು ಕಾಲೇಜು ಕನ್ನಡ ಉಪನ್ಯಾಸಕಿ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತವನಿಧಿ ಗ್ರಾಮದ ಲಲಿತಮ್ಮ ಹಾಗೂ ನೀಲಕಂಠಯ್ಯ ಅವರ ಮಗಳಾದ ಎನ್.ಗುರುಪಾದಮ್ಮ ವೀರಭದ್ರಪ್ಪ (ಉಷಾ ತವನಿಧಿ) ಅವರಿಗೆ ಕನ್ನಡ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್ಡಿ ಪದವಿ ನೀಡಿದೆ.

- Advertisement - 

 ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಸಹ ಪ್ರಾಧ್ಯಾಪಕ ಡಾ.ನಲ್ಲಿಕಟ್ಟೆ ಸಿದ್ದೇಶ್ ಅವರ ಮಾರ್ಗದರ್ಶನದಲ್ಲಿ ನವೋದಯ ಕಾವ್ಯ : ಮಾತೃತ್ವದ ಸಂಕಥನಗಳುಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್ಡಿ ಪದವಿಗೆ ಅಂಗೀಕರಿಸಿದೆ.

- Advertisement - 

Share This Article
error: Content is protected !!
";