ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪವಿತ್ರ ವೈಕುಂಠ ಏಕಾದಶಿ ಪರ್ವದಿನದ ಪ್ರಯುಕ್ತ ಹಿರಿಯೂರಿನ ಹುಳಿಯಾರ್ ರಸ್ತೆಯ ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಡಿ.30 ರಂದು ಮಂಗಳವಾರ ಭಕ್ತರಿಗೆ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ವೈಕುಂಠ ಏಕಾದಶಿಯಂದು ಭಕ್ತರಿಗೆ ಸುಗಮ ಮತ್ತು ಅನುಕೂಲಕರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಂದು ಮುಂಜಾನೆ 2 ಗಂಟೆಯಿಂದ ಸುಪ್ರಭಾತ, ಪಂಚಾಮೃತ ಅಭಿಷೇಕ, ಶ್ರೀನಿವಾಸ ಅಷ್ಟೋತ್ತರ, ಮಹಾಸಂಕಲ್ಪ, ಅಲಂಕಾರ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಭಕ್ತರಿಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ಪವಿತ್ರ ದಿನದಂದು ಆಗಮಿಸುವ ಭಕ್ತಾದಿಗಳಿಗೆ ದರ್ಶನ ನಂತರ ಲಡ್ಡು ಪ್ರಸಾದ ವಿನಿಯೋಗ ಇರುತ್ತದೆ.
ಎಸ್ಎಲ್ ವಿಡಿಟಿ ಗೌರವಾಧ್ಯಕ್ಷರಾದ ಸೀತಾ ಶ್ರೀನಿವಾಸನ್ ಇವರಿಂದ ಲಡ್ಡು ಪ್ರಸಾದ ವಿನಿಯೋಗ ಇರುತ್ತದೆ.
ಜಯಶ್ರೀ ಕಣ್ಣಪ್ಪ ಮತ್ತು ಕೌಶಿಕ್ ನಾಯ್ಡು ಇವರಿಂದ ಪುಷ್ಪಾಲಂಕಾರ ಇರುತ್ತದೆ. ಸಿದ್ದರಾಮೇಶ್ವರ ಡೆವಲಪರ್ಸ್ ಮತ್ತು ಶ್ರೀ ವೆಂಕಟೇಶ್ವರ ಅರ್ಥ ಮೂವರ್ಸ್ ಮಾಲೀಕರಾದ ಮೇಟಿಕುರ್ಕೆ ಹೆಚ್.ನಟೇಶ್ ಇವರಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಮತ್ತು ದೇವಸ್ಥಾನಕ್ಕೆ ಸಂಪೂರ್ಣವಾಗಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಇರುತ್ತದೆ ಎಂದು
ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸುಬ್ರಮಣ್ಯ ದೀಕ್ಷಿತ್, ಕಾರ್ಯದರ್ಶಿ ವಿ. ಮಂಜುನಾಥ್ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

