ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಷ್ಟುದಿನ ಸಶ್ಮಾನದ ಸಮಾಧಿಯಲ್ಲಿ ಮಲಗಿದ್ದ ವಕ್ಫ್‌ಪೆಡಂಭೂತವನ್ನು ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಮತ್ತೆ ಸಮಾಧಿ ಅಗೆದು ಹೊರ ಬಿಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ 65ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ವಕ್ಫ್‌ಬೋರ್ಡ್‌ತನ್ನ ಹೆಸರಿಗೆ ತೆಗೆದುಕೊಂಡ ಮೇಲೆ ಇದೀಗ 50ಕ್ಕೂ ಹೆಚ್ಚು ರೈತರ ಪಹಣಿಯಲ್ಲಿ ವಕ್ಫ್‌ಬೋರ್ಡ್‌ಭೂತ ವಕ್ಕರಿಸಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಅನಾಚಾರಗಳನ್ನು ಮುಚ್ಚಿಕೊಳ್ಳಲು ವಕ್ಫ್‌ಬೋರ್ಡ್‌ಅನ್ನು ಮತ್ತೆ ಮುನ್ನಲೆಗೆ ತಂದು ವಿವಾದ ಸೃಷ್ಟಿಸುತ್ತಿದೆ. ವಕ್ಫ್‌ಭೂತದ ಹಿಂದೆ ಸಚಿವ ಜಮೀರ್ ಅಹಮದ್ ಖಾನ್ ಅವರು ನಿಂತಿದ್ದಾರೆ ಎಂದು ಬಿಜೆಪಿ ದೂರಿದೆ.