ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನ ಜಾತ್ರೆ ಆರಂಭಗೊಂಡಿದ್ದು, ಗುರುವಾರ ಬೆಳಿಗ್ಗೆ ಅಲಂಕೃತ ಸಾರೋಟಿನಲ್ಲಿ ಕಣಿವೆಮಾರಮ್ಮನ ಮೆರವಣಿಗೆ ರಾಜಬೀದಿಗಳಲ್ಲಿ ಸಾಗಿತು. ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಉಮೇಶ್‌ಬಾಬುರವರು ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ಸಿಂಗರಿಸಿದ್ದ ಕಣಿವೆಮಾರಮ್ಮನ ಮೆರವಣಿಗೆ ಮದಕರಿವೃತ್ತದ ಮೂಲಕ ಕರುವಿನಕಟ್ಟೆ ಸರ್ಕಲ್, ಏಕನಾಥೇಶ್ವರಿ ಪಾದಗುಡಿ, ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗ, ಆನೆಬಾಗಿಲಿನಿಂದ ದೇವಸ್ಥಾನ ತಲುಪಿತು.
ಡೊಳ್ಳು ಕುಣಿತ, ತಮಟೆ, ಸೋಮನಕುಣಿತ, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿದ್ದರು. ಸೈಬರ್ ಕ್ರೈಂ ಡಿ.ವೈ.ಎಸ್ಪಿ. ಉಮೇಶ್ ಈಶ್ವರ್‌ನಾಯ್ಕ, ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್ಪಿ. ಗಣೇಶ್ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಮೆರವಣಿಗೆ ಸಂದರ್ಭದಲ್ಲಿದ್ದರು.