ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಗೌಡ ರವರು ಡಿಶ್ ಮಂಜಣ್ಣ ರವರಿಗೆ ಹಲ್ಲೆ ಮಾಡಿರುವುದನ್ನು ತಾಲ್ಲೂಕು ವಾಲ್ಮೀಕಿ ನಾಯಕ ಸಮುದಾಯ ಖಂಡಿಸಿದೆ.
ನಂಜಯ್ಯನ ಕೊಟ್ಟಿಗೆಯ ಡಿಶ್ ಮಂಜಣ್ಣನವರನ್ನು ಹಿರಿಯೂರು ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಆದ ಮಹೇಶ್ ಗೌಡ ಅವರು ಮೂರು ದಿನಗಳಿಂದೆ ಹಲ್ಲೆ ಮಾಡಿರುವ ಪ್ರಕರಣ ಮಾಧ್ಯಮದಲ್ಲಿ ಪ್ರಸಾರ ಆಗಿದೆ.
ಎಸ್ ಪಿ ಕಚೇರಿಯಲ್ಲಿ ಸಮುದಾಯದಿಂದ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಹಿರಿಯೂರು ಡಿವೈಎಸ್ಪಿ ರವರಿಗೆ ದೂರು ನೀಡಲಾಗಿದೆ. ಯಾವುದೇ ರೀತಿಯ ಪ್ರಕರಣ ದಾಖಲಾಗಿರುವುದಿಲ್ಲ. ಪ್ರಯುಕ್ತ ಈ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯ ಹಿರಿಯೂರಿನಲ್ಲಿ ಸಮುದಾಯ ಸಭೆ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ.
ಈ ನಿರ್ಧಾರಕ್ಕೆ ಸಂಬಂಧಿಸಿದಂತ ಹಿರಿಯ ಪೊಲೀಸ್ ಅಧಿಕಾರಿಗಳು ಮಹೇಶ್ ಗೌಡ ಸಬ್ ಇನ್ಸ್ಪೆಕ್ಟರ್ ನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಅಥವಾ ಸಸ್ಪೆಂಡ್ ಮಾಡಬೇಕು.
ಕ್ರಮ ಕೈಗೊಳ್ಳದಿದ್ದರೆ ಶುಕ್ರವಾರ ತನಕ ಕಾಲಾವಕಾಶವನ್ನು ಸಮಾಜವು ನೀಡಿರುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಫೆ.21ರಂದು ಶನಿವಾರ ತಾಲೂಕು ಕಚೇರಿ ಮುಂದೆ ವಾಲ್ಮೀಕಿ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

