ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗವನ್ನು ಆಳ್ವಿಕೆ ಮಾಡಿದ ಮದಕರಿ ನಾಯಕರು ಕೇವಲ ಒಂದು ಜಾತಿಗೆ ಸೀಮಿತ ಮಾಡುವುದು ಬೇಡ, ಮದಕರಿ ನಾಯಕರು ಸದಾ ಜಾತ್ಯಾತೀತ ನಾಯಕನಾಗಿದ್ದು ಆಡಳಿತ ಮಾಡಿದ್ದಾರೆ ಎಂದು ವಾಲ್ಮೀಕಿ ಗುರಪೀಠದ ಶ್ರೀ ವಾಲ್ಮಿಕಿ ಪ್ರಸನ್ನಾನಂದ ಶ್ರೀಗಳು ಹೇಳಿದರು.
ನಗರದ ರಾಜ ವೀರ ಮದಕರಿ ನಾಯಕ ವೃತ್ತದಲ್ಲಿ ಭಾನುವಾರ ನಡೆದ ರಾಜ ವೀರ ಮದಕರಿ ಜಯಂತಿ ಕಾರ್ಯಕ್ರಮದಲ್ಲಿ ಮದಕರಿ ಪ್ರತಿಮೆ ಪುಷ್ಪಾರ್ಚಣೆ ಮಾಡಿ ಮಾತನಾಡಿದ ಶ್ರೀಗಳು, ಚಿತ್ರದುರ್ಗ ಆಳಿದ ನಾಡದೂರೆ ರಾಜ ವೀರ ಮದಕರಿನಾಯಕರ ಜಂಯತೋತ್ಸವವನ್ನು ಅತಂತ್ಯ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಮೊಗಲರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸುತ್ತಾ-ಮುತ್ತಲ್ಲಿನ ವೈರಿಗಳನ್ನು ಹಿಮೆಟ್ಟಿಸಿ ಚಿತ್ರದುರ್ಗವನ್ನು ಮದಕರಿ ನಾಯಕ ಹಲವು ವರ್ಷಗಳ ಕಾಲ ಆಳ್ವಿಕೆ ನಡೆಸಿ ಒಬ್ಬ ಜಾತ್ಯಾತೀತ ನಾಯಕರೆನಿಸಿಕೊಂಡಿರುವ ಮದಕರಿ ನಾಯಕರ ಆದರ್ಶಗಳನ್ನು ನಾವು ನೀವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗದಲ್ಲಿ ಮದಕರಿ ನಾಯಕರ ಜಯಂತಿಯನ್ನು ಈ ವರ್ಷ ಸರಳ ಮತ್ತು ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ಮದಕರಿ ನಾಯಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಮದಕರಿ ಜಯಂತಿ ಅಚರಣೆಯ ಬಗ್ಗೆ ತೀರ್ಮಾನ ತೆಗೆದುಕೊಂಡು ಎಲ್ಲರನ್ನು ಜೊತೆಗೂಡಿಸಿ ಆಚರಣೆ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್, ಜೆಡಿಎಸ್‌ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಬಿಜೆಪಿ ಮುಖಂಡರಾದ ರತ್ನಮ್ಮ, ಸೋಮು,
ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಕಾಟೇಹಳ್ಳಿ ಕರಿಯಣ್ಣ, ಜಿ.ಟಿ ರಾಜೇಶ್, ನಗರಸಭಾ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಅಹೋಬಲ ಶೋ ರೂಂ ಮಾಲೀಕ ಅರುಣ್ ಕುಮಾರ್, ಅಜೆಯ ಮದಕರಿ, ದರ್ಶನ್, ತಿಪ್ಪೇಸ್ವಾಮಿ, ರಾಜ ಮದಕರಿ ನಾಯಕ, ಕಿರಣ್, ಸಿರುವಲ್ಲಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.