ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರ್ ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅದ್ಧೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ವಾಲ್ಮೀಕಿ ಭಾವಚಿತ್ರದೊಂದಿಗೆ ನಡೆದ ಮರೆವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಹೆಜ್ಜೆ ಹಾಕಿದ್ದು ನೋಡುಗರ ಗಮನ ಸೆಳೆಯಿತು.
ಕಣಜನಹಳ್ಳಿ ಗ್ರಾಮದ ದೇವಾಲಯದ ಬಳಿಯಿಂದ ಹೊರಟ ಮೆರವಣಿಯಲ್ಲಿ ನೂರಾರು ಕಳಸ ಹೊತ್ತ ಹೆಂಗಳೆಯರು ಮೆರವಣಿಗೆಗೆ ಮೆರುಗು ನೀಡಿದರು. ಮಂಗಳವಾದ್ಯ ಮೆರವಣಿಗೆ ಕಳೆಗಟ್ಟುವಂತೆ ಮಾಡಿತು.
ಮಹರ್ಷಿ ವಾಲ್ಮೀಕಿಯ ಭಾವಚಿತ್ರದೊಂದಿಗೆ ಹೆಜ್ಜೆ ಹಾಕಿದ ನೂರಾರು ಜನರ ನಡಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿನಿಂತು ವೀಕ್ಷಿಸಿದ ನಾಗರಿಕರು ಸಂಭ್ರಮಿಸಿದರು.

ಇಡೀ ಮೆರವಣಿಗೆಯಲ್ಲಿ ಚಿಕ್ಕ ಮಕ್ಕಳು, ಮಹಿಳೆಯರು, ಪುರುಷರು ಕೇಸರಿ ಬಣ್ಣದ ಸಮವಸ್ತ್ರ ಧರಿಸಿ ಗಮನ ಸೆಳೆದರು. ಮಕ್ಕಳು ಕುಣಿದ ಕುಪ್ಪಳಿಸಿದರು. ಪಟಾಕಿಗಳ ಸದ್ದು ಕೂಡ ಜೋರಾಗಿತ್ತು.

