3ನೇ ಬಾರಿಗೆ ಭರ್ತಿಯಾದ ವಾಣಿ ವಿಲಾಸ ಸಾಗರ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಶನಿವಾರ 130.00 ಅಡಿಗೆ ಏರಿಕೆಯಾಗಿ ಭರ್ತಿಯಾಗಿ ಕೋಡಿ ಹರಿದಿದೆ.

1907ರಿಂದ ಇಲ್ಲಿಯ ತನಕ ಮೂರು ಸಲ ಮಾತ್ರ ಭರ್ತಿಯಾಗಿದೆ. 1933, 2022 ಮತ್ತು 2025ರ ಜನವರಿ-11 ರಂದು ಶನಿವಾರ ವಿವಿ ಸಾಗರ ಭರ್ತಿಯಾಗಿ ಕೋಡಿ ಹರಿಯುವ ಮೂಲಕ 3ನೇ ಬಾರಿಗೆ ಭರ್ತಿಯಾಗಿದೆ.

ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಪ್ರತಿ ದಿನ 693 ಕ್ಯೂಸೆಕ್ ನೀರಿನ ಒಳ ಹರಿವು ಇದೆ.
ತರೀಕೆರೆ ಸಮೀಪದ ಬೆಟ್ಟದತಾವರೆಕೆರೆ ಸಮೀಪ ಇರುವ ಪಂಪ್ ಹೌಸ್ ನಿಂದ ಪ್ರತಿ ನಿತ್ಯ ಒಂದು ಪಂಪ್ ರನ್ ಮಾಡಿ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿರುವುದರಿಂದ ಸುಮಾರು 693 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಇನ್ನು ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.

- Advertisement -  - Advertisement - 
Share This Article
error: Content is protected !!
";