ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ನಗರದ ಟಿ.ಬಿ.ಸರ್ಕಲ್ ನಿಂದ ತಾಲ್ಲೂಕು ಕಚೇರಿವರೆಗಿನ ರಸ್ತೆ ಅಗಲೀಕರಣ ಕಾಮಾಗರಿ ನಿಮಿತ್ತ ಏಪ್ರಿಲ್ 20 ಭಾನುವಾರದಂದು ಬೆಳಿಗ್ಗೆ 10 ಗಂಟೆಯಿAದ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಹಿರಿಯೂರಿನ ಆವಧಾನಿನಗರ, ತಾಲ್ಲೂಕು ಕಚೇರಿ, ಆಜಾದ್ ನಗರ, ಚಿಕ್ಕಪೇಟೆ, ತೇರುಮಲ್ಲೇಶ್ವರ ದೇವಸ್ಥಾನದ, ಗಾಂಧಿ ವೃತ್ತ, ಹುಳಿಯಾರು ರಸ್ತೆ, ಹರಿಶ್ಚಂದ್ರ ಘಾಟ್, ಲಕ್ಕವನಹಳ್ಳಿ, ದೊಡ್ಡಘಟ್ಟ, ಸೀಗೇಹಟ್ಟಿ, ಕೂನಿಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. ಗ್ರಾಹಕರು ಸಹರಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.