ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆಯಾಗಿ. ಪಲ್ಸ್ ಪೋಲಿಯೋ ನಿರ್ಮೂಲನೆಗೆ ರೋಟರ್ ಇಂಟರ್ ನ್ಯಾಷನಲ್ ಸಂಸ್ಥೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಪಲ್ಸ್ ಪೋಲಿಯೋ ಮುಕ್ತ ಭಾರತವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಕೆ.ರವೀಂದ್ರ ಹೇಳಿದರು. ನಗರದ ರೋಟರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2025-2026 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಕಳೆದ 2024-2025 ನೇ ಸಾಲಿನ ರೋಟರಿ ಅಧ್ಯಕ್ಷ ಜಿ.ಎಸ್.ಕಿರಣ್ ಮತ್ತು ಕಾರ್ಯದರ್ಶಿ ರಾಘವೇಂದ್ರಚಾರ್ ರವರು ಅತ್ಯಂತ ಸಾಮಾಜಿಕ ಕಾಳಜಿ ಹೊಂದಿ ಉತ್ತಮ ಜನಪರ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ರೋಟರಿ ಸಂಸ್ಥೆ ಉತ್ತಮ ಸಂಸ್ಥೆಯಾಗಿ ಹೆಸರು ಮಾಡಿದೆ ಎಂದು ಅವರು ಪ್ರಶಂಸಿಸಿದರು.
2025- 26 ನೇ ಸಾಲಿನ ರೋಟರಿಯ ನೂತನ ಅಧ್ಯಕ್ಷರಾದ ಕೆ.ಎ.ವರುಣ್ ಮತ್ತು ಕಾರ್ಯದರ್ಶಿ ಡಿ. ವಿಕಾಸ್ ಜೈನ್ ಮತ್ತು ನೂತನ ಪದಾಧಿಕಾರಿಗಳಿಗೆ ರೋಟರಿ ಪಿನ್ ಹಾಕುವ ಮೂಲಕ ರೋಟರಿ ಪದಗ್ರಹಣದ ಪ್ರಮಾಣವಚನ ಬೋಧನೆ ಮಾಡಿ ಇನ್ನು ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ರೋಟರಿ ಎಂದು ಹೆಸರು ಪಡೆಯಬೇಕು ಎಂಬುದಾಗಿ ಶುಭ ಹಾರೈಸಿದರು.
ರೋಟರಿ ರೆಡ್ ಕ್ರಾಸ್ ಸಂಸ್ಥೆಗಳು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಹೊರ ಮತ್ತು ಒಳರೋಗಿಗಳಿಗೆ ಉಚಿತ ಊಟವನ್ನು ವಾರದಲ್ಲಿ ನಾಲ್ಕು ದಿನಗಳು ನೀಡುತ್ತಿರುವುದು ಸಂತೋಷದ ವಿಚಾರ ಎಂದು ಅವರು ಶ್ಲಾಘಿಸಿದರು.
ಹಿಂದಿನ ರೋಟರಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಹಾಗೆ ತಾವು ಸಹ ತಮ್ಮ ಸೇವಾ ಕಾರ್ಯಗಳ ಮಾಡುವ ಮೂಲಕ ರೋಟರಿ ಸಂಸ್ಥೆಗೆ ಹೆಸರು ತರುವಂತೆ ಕಿವಿಮಾತು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
2025- 26 ನೇ ಸಾಲಿನ ರೋಟರಿ ಅಧ್ಯಕ್ಷ ಕೆ.ಎ. ವರುಣ್ ಪದಗ್ರಹಣ ಸ್ವೀಕರಿಸಿ ಮಾತನಾಡಿ ಅಧ್ಯಕ್ಷ ಸ್ಥಾನ ದೊರೆತಿರುವುದು ಸಂತಸದ ವಿಚಾರವಾಗಿದ್ದರೂ ಬಹು ಜವಾಬ್ದಾರಿತವಾಗಿದ್ದು ಹೊಣೆಗಾರಿಕೆ ಹೆಚ್ಚಿದೆ. ಸಾಮಾನ್ಯ ಜನರ ಆರೋಗ್ಯ ರಕ್ಷಣೆ ಸೇವಾ ಕಾರ್ಯಗಳ ಜೊತೆಗೆ ಶಿಕ್ಷಣಕ್ಕೆ ಒತ್ತು ಕೊಡುವುದರ ಜೊತೆಗೆ ಹೆಚ್ಚು ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.
ನಾನು ಸೇರಿದಂತೆ ನೂತನ ಕಾರ್ಯದರ್ಶಿ ಡಿ. ವಿಕಾಸ್ ಜೈನ್ ಮತ್ತು ಪದಾಧಿಕಾರಿಗಳು, ದಾನಿಗಳ ಸಹಕಾರಗಳೊಂದಿಗೆ ಮುನ್ನಡೆಯುತ್ತೇನೆ, ಈ ಕೆಲಸಕ್ಕೆ ರೆಡ್ ಕ್ರಾಸ್ ಸಂಸ್ಥೆಯು ಸಹ ಸಹಕಾರ ನೀಡುವಂತೆ ಕೋರಿದರು.
ರೋಟರಿಯ ನೂತನ ಪದಾಧಿಕಾರಿಗಳಾಗಿ ಎಸ್. ಕಿರಣ್ ಕುಮಾರ್, ಸಹ ಕಾರ್ಯದರ್ಶಿ ರಾಘವೇಂದ್ರ ಮತ್ತು ಬಿ.ಕೆ.ನಾಗಣ್ಣ, ಎಂ.ಎಸ್.ರಾಘವೇಂದ್ರ, ಸಣ್ಣಭೀಮಣ್ಣ, ಹೆಚ್. ಎಸ್. ಪ್ರಶಾಂತ್, ಹೆಚ್. ಕಿರಣ್, ಎಂ.ವಿ.ಹರ್ಷ, ಡಿ ದೇವರಾಜ್ ಮೂರ್ತಿ, ಎಸ್. ಜೋಗಪ್ಪ, ವಿ.ವಿಶ್ವನಾಥ್, ಆರ್. ಅನಿಲ್ ಕುಮಾರ್, ಡಾ.ವೆಂಕಟೇಶ್, ಧನರಾಜ್ ಛಾಜೆಡ್, ಎಂ.ಯು.ಶಿವರಾಂ, ಹೆಚ್. ವೆಂಕಟೇಶ್, ಎ. ಬಾಲಾಜಿ, ಚಂದ್ರಹಾಸ್, ರಾಘವೇಂದ್ರಚಾರ್, ಕೆ. ವೆಂಕಟ ರಾಘವನ್, ಎಸ್. ಎಲ್. ರಿತೇಷ್, ಚಂದ್ರಕೀರ್ತಿ ಗುಜ್ಜಾರ್, ಎಸ್. ಬಿ. ಸಚಿನ್ ಗೌಡ ಇವರುಗಳನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಗಣ್ಯ ವ್ಯಕ್ತಿಗಳಿಂದ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಪುಷ್ಪಮಾಲೆ ಹಾಕಿ ಶುಭಹಾರೈಸಿದರು.
ಈ ಸಾಲಿನ ಪ್ರತಿಭಾವಂತ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸೀತಾ ಶ್ರೀನಿವಾಸರವರು ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಿ, ಗೌರವಧನ ವಿತರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರೋಟೇರಿಯನ್ ಗಳಾದ ಎಲ್.ಆನಂದಶೆಟ್ಟಿ, ಹೆಚ್.ಎಂ.ಬಸವರಾಜ್, ಟಿ.ಮಲ್ಲೇಶಪ್ಪ, ಆರ್. ಎಸ್. ವಸಂತ್ ಕುಮಾರ್, ಹೆಚ್.ಎಸ್.ಸುಂದರ್ ರಾಜ್, ಹೆಚ್ .ಆರ್. ವಸಂತ್ ಇತರೆ ರೋಟರಿ ಮಿತ್ರರು, ಇನ್ಹರ್ ವೀಲ್ಹ್ ನೂತನ ಅಧ್ಯಕ್ಷೆ ರೋಷಿನಿ ಮಹೇಶ್, ಸರ್ವಮಂಗಳ ರಮೇಶ್, ಇಂಪಾ ರಿತೇಶ್, ಪದ್ಮಜಾ ಎಂ ಶೆಟ್ಟಿ, ಲತಾ ಅನಿಲ್ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.