ಅಮೆರಿಕದಲ್ಲೂ ಬಸವಣ್ಣನ ಕಹಳೆಯೂದಿದ ವೀರಶೈವರು

News Desk

ಚಂದ್ರವಳ್ಳಿ ನ್ಯೂಸ್, ಅಮೆರಿಕ:
ವೀರಶೈವ ಸಮಾಜ ಆಫ್ ನಾರ್ಥ ಅಮೆರಿಕ (
VSNA) ವತಿಯಿಂದ ಮಿಚಿಗನ್ ರಾಜ್ಯದ ಡೆಟ್ರ್ಯಾಟ್ ಶಹರದಲ್ಲಿ ಆರಂಭಗೊಂಡ 47ನೇಯ ಶರಣ ಸಂಗಮ‌ ಕಾರ್ಯಕ್ರಮ ಅಮೋಘವಾಗಿ ನಡೆಯುತ್ತಿದೆ.

ಮಹೇಶ ಪಾಟೀಲರ ಅಧ್ಯಕ್ಷತೆ ಹಾಗೂ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಪ್ರಭಾಕರ ಕೋರೆ, ಮಾಜಿ ಸಚಿವರುಗಳಾದ ಶಂಕರ ಪಾಟೀಲಮುನೇನಕೊಪ್ಪ, ಮುರಗೇಶ ನಿರಾಣಿ, ಎಂಎಲ್ಸಿಗಳಾದ ಪ್ರದೀಪ ಶೆಟ್ಟರ್, ನವೀನ, ಸಮಾಜದ ದಯಾನಂದ, ದೊಡ್ಡಮನಿ ಭಾಗವಹಿಸಿದ್ದಾರೆ.

- Advertisement - 

“ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ, ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ, ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ” ಎಂಬ ಮಾತಿನಂತೆ ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಪ್ರಮುಖರು ಅಮೆರಿಕದಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿಸುವುದಕ್ಕೆ ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಸರಕಾರದ ಯಾವುದೆ ಸಹಾಯವಿಲ್ಲದೇ 47ನೇಯ ಶರಣ ಸಂಗಮ ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯವಾಗಿದೆ. ಅಮೆರಿಕದ ವೀರಶೈವ ಲಿಂಗಾಯತ ಸಮಾಜದವರು, ಸಮಾಜಕ್ಕಾಗಿ 8 ಕೋಟಿ ರೂಪಾಯಿ ಸೇರಿಸಿದ್ದು ಸ್ಮರಣೀಯ.

- Advertisement - 

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಪ್ರಭಾಕರ ಕೋರೆಯವರು ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಎಂಬಂತಹ ಸಾಮಾಜಿಕ ಮತ್ತು ಧಾರ್ಮಿಕ ತತ್ವಗಳನ್ನು ಸಾರಿದ್ದಾರೆ. “ಒಂದಾಗುವ” ಎಂಬ ಆಶಯವು ಅವರ ವಚನಗಳಲ್ಲಿ ಅಂತರ್ಗತವಾಗಿ ಕಂಡುಬರುತ್ತದೆ, ಇದು ಭಕ್ತನು ದೇವರೊಂದಿಗೆ ಐಕ್ಯವಾಗುವ ಅಥವಾ ಶರಣರ ಸಮುದಾಯದಲ್ಲಿ ಬೆರೆಯುವ ಆಶಯವನ್ನು ಸೂಚಿಸುತ್ತದೆ ಎಂಬುದನ್ನು ನಾವೂ ಅರಿತುಕೊಳ್ಳಬೇಕೆಂದು ಹೇಳಿದರು.

Share This Article
error: Content is protected !!
";