ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ,ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮೀಣ ಜೈವಿಕ ಇಂಧನ ಘಟಕಕ್ಕೆ ಅಧ್ಯಕ್ಷರಾಗಿ ವೆಂಕಟೇಶ್ ಬಾಬು ಉಪಾಧ್ಯಕ್ಷರಾಗಿ ಹಾಡೋನಹಳ್ಳಿ ಮುನೇಗೌಡ ಅವಿರೋಧ ಅಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕೆ ನಾರಾಯಣ ಗೌಡ ಕಾರ್ಯದರ್ಶಿಯಾಗಿ ಬಚ್ಚಹಳ್ಳಿ ನಾಗರಾಜ್ ನಿರ್ದೇಶಕರಾಗಿ ಹಾಡೋನಹಳ್ಳಿ ನಾರಾಯಣಪ್ಪ ಹೆಚ್ ಎ ನಾಗರಾಜ ಜಗನ್ನಾಥ ಚಾರ್ ಮುರಳಿ ಕುಮಾರ್ ಪುರುಷೋತ್ತಮ್ ಭಾಸ್ಕರ್ ಅವಿರೋಧವಾಗಿ ಅಯ್ಕೆ ಮಾಡಲಾಗಿದೆ.
ದೇಶದಲ್ಲಿ ಆಹಾರ ಅಹಾ ಕಾರದ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿ ಯಿಂದ ರೈತರಿಗೆ ಹೊಸ ಹೊಸ ತಳಿಗಳು ಹಾಗು ತಂತ್ರಜ್ಞಾನದ ಪರಿಚಯ ಮಾಡುವ ಉದ್ದೇಶದಿಂದ ಕೃಷಿ ವಿಜ್ಞಾನ ಕೇಂದ್ರವು 2005 ಸ್ಥಾಪನೆಯಾಯಿತು ಇಂದು ದೇಶದಾದ್ಯಂತ ಪ್ರತಿ ಜಿಲ್ಲೆಗಳಲ್ಲಿಯೂ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಿ ರೈತರಿಗೆ ನೇರವಾಗುತ್ತಿದೆ ಜೈವಿಕ ಹಿಂದನ ಘಟಕವನ್ನು ಕೈಷಿ ವಿಜ್ಞಾನ ಕೇಂದ್ರ ಮೂಲಕ ಪರಿಚಯಸಲಾಗುತ್ತಿದೆ ಎಂದು ಗ್ರಾಮೀಣ ಜೈವಿಕ ಇಂದನ ಘಟಕದ ಗೌರವಾಧ್ಯಕ್ಷ ಕೆ. ನಾರಾಯಣಗೌಡ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೆಡೆದ ಗ್ರಾಮೀಣ ಜೈವಿಕ ಇಂಧನದ ಸಂಘ ದಿಂದ ನೂತನ ಅಧ್ಯಕ್ಷ ಉಪಾಧ್ಯಕ್ಷ ನಿರ್ದೇಶಕರುಗಳು ಆಯ್ಕೆಯ ಸಂದರ್ಭದಲ್ಲಿ ಅವರು ಮಾತನಾಡಿ ಜೈವಿಕ ಇಂಧನ ತಯಾರು ಘಟಕದಿಂದ ಬರುವ ಇಂಡಿ ಯನ್ನು ಸಾವಯವ ಕೈಷಿಗೆ ಅಳವಡೆಕೆ ಮಾಡಿ ಕೊಂಡರೆ ಭೂ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆಗಳಿಂದ ಆರೋಗ್ಯಕರವಾದ ಕೃಷಿ ಯಿಂದ ಮನುಷ್ಯ ಆರೋಗ್ಯವು ಚೆನ್ನಾಗಿರುತ್ತದೆ ಎಂದರು.
ಹಾಗು ರೈತರ ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಲು ಹಾಗು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾಯಿತು. ಕೃಷಿ ವಿಜ್ಞಾನ ಕೇಂದ್ರವು ಕೇವಲ ವೃತ್ತಿಪರ ತರಬೇತಿಗಳನ್ನು ನೀಡುವುದಲ್ಲದೆ ಕೃಷಿಯಾದರಿತ ಪ್ರತಿ ಸಮಸ್ಯೆಗೂ ಸೂಕ್ತ ಸಲಹೆಗಳನ್ನು ನೀಡಲಾಗುವುದು ಎಂದರು.
ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ ಬಿ ಜಿ. ಹನುಮಂತರಾಯಪ್ಪ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಬದಲಾವಣೆ ಹಾದಿಯಲ್ಲಿದ್ದು ಈ ಕೃಷಿ ವಿಜ್ಞಾನ ಕೇಂದ್ರದ ಕಾರ್ಯವು ಶ್ಲಾಘನೀಯ ವಾದದ್ದು ರೈತರ ಪ್ರಗತಿಗೆ ಉತ್ತಮ ಸಲಹೆ ನೀಡುತ್ತಾ ಇದ್ದು ಕೃಷಿಯಲ್ಲಿ ಉತ್ತಮ ರೀತಿಯಲ್ಲಿ ಸಹಕಾರಿಯಾಗಿದೆ ಎಂದರು.
ನಂತರ ನೂತನ ಅಧ್ಯಕ್ಷ ವೆಂಕಟೇಶ್ ಬಾಬು ಮಾತನಾಡಿ ಹಾಡೋನಹಳ್ಳೀ ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯಲ್ಲಿ ಸಾಕಷ್ಠು ರೈತರಿಗೆ ಅನುಕೂಲಗಳನ್ನು ಮಾಡಿಕೊಟ್ಟಿದೆ ಪ್ರತಿವರ್ಷವು ಹೊಸ ಹೊಸ ತಳಿಗಳನ್ನು ತಂದು ರೈತರಿಗೆ ಪರಿಚಯ ಮಾಡಲಾಗುತ್ತಿದ್ದು ಪ್ರತಿ ಗ್ರಾಮದಲ್ಲಿ ಮಣ್ಣು ಪರೀಕ್ಷೆ ಹಾಗು ಯಾವ ಬೆಳೆ ಇಟ್ಟರೆ ಚನ್ನಾಗಿ ಪಸಲು ಬರುತ್ತೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು ಮಣ್ಣು ಪರೀಕ್ಷೆಯಲ್ಲಿ ಯಾವ ಅಂಶ ಕಡಿಮೆ ಇದೆ ಕೃಷಿ ತೋಟಗಾರಿಕೆ ಬೆಳೆಗಳ ಪೋಷಕಾಂಶ ನಿರ್ವಹಣೆ ಹಾಗು ಕೀಟಗಳಿಂದ ರೋಗಗಳ ನಿಯಂತ್ರಣ ಇಂತಹ ಮಾಹಿತಿ ತಿಳಿಸುವುದರ ಮುಖಾಂತರ ರೈತರಿಗೆ ಅನುಕೂಲವಾಗಿದೆ ಎಂದರು.