ಡಿಜಿಟಲ್ ರೂಪದಲ್ಲಿ ಭೂದಾಖಲೆ ವಿತರಣೆ-ಜಿಲ್ಲಾಧಿಕಾರಿ ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಂದಾಯ ಇಲಾಖೆಯು ಕೈಬರಹದಲ್ಲಿ ಭೂದಾಖಲೆ ನೀಡುವ ವ್ಯವಸ್ಥೆಗೆ ತಿಲಾಂಜಲಿ ಹಾಡಿದ್ದು, ಡಿಜಿಟಲ್ ರೂಪದಲ್ಲಿ ವಿತರಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

- Advertisement - 

ಈಗಾಗಲೇ ಡಿಜಿಟಲ್ ಭೂದಾಖಲೆಗಳ ವಿತರಣೆ ಶುರುವಾಗಿದೆ. ಇನ್ನೂ ಮುಂದೆ ಹಾಗೂ ಬಿವರ್ಗದ ಭೂ ದಾಖಲೆಗಳನ್ನು ಸಂಪ್ರದಾಯಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ಮೂಲಕ ನೀಡುವ ಬದಲಾಗಿ ಡಿಜಿಟಲ್ ರೂಪದಲ್ಲಿಯೇ ನೀಡಲಿದೆ. ಸದ್ಯ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆ ನೀಡಲಾಗುತ್ತಿದೆ.

- Advertisement - 

ಅರ್ಜಿದಾರರು ಕೋರುವ ಭೂ ದಾಖಲೆ ಈಗಾಗಲೇ ಸ್ಕ್ಯಾನ್ ಆಗಿ ದೃಢೀಕರಣಗೊಂಡಿದ್ದರೆ ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಣೆ ಆಗಲಿದೆ. ಒಂದೊಮ್ಮೆ ಸ್ಕ್ಯಾನಿಂಗ್ ಪ್ರಕ್ರಿಯೆ ಆಗಿರದಿದ್ದರೇ 07 ದಿನಗಳೊಳಗೆ ಡಿಜಿಟಲ್ ದಾಖಲೆ ವಿತರಣೆ ಆಗಲಿದೆ. ಇದರಿಂದ ಭೂದಾಖಲೆಗಳನ್ನು ಯಾವುದೇ ಅಡಚಣೆ ವಿಳಂಬವಿಲ್ಲದಂತೆ ಪಡೆಯಲು ಅನುಕೂಲವಾಗಲಿದೆ.

ಭೂದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ಉದ್ದೇಶದಿಂದ ಕಂದಾಯ ಇಲಾಖೆ ಈಗಾಗಲೇ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ರೈತರು ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

- Advertisement - 

 

 

Share This Article
error: Content is protected !!
";