ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ವಿರುದ್ದ ೧೪ ಸದಸ್ಯರು ಉಪ ವಿಭಾಗಧಿಕಾರಿಗಳಿಗೆ ಅವಿಶ್ವಾಸ ಮಂಡನೆ ಮಾಡಿದ್ದರು ಆದರೆ ಅವಿಶ್ವಾಸ ಸಾಬೀತು ಮಾಡದಿದ್ದ ಕಾರಣದಿಂದ ಉಮೇಶ್ ಅವರು ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಭೀಮಸಮುದ್ರ ಗ್ರಾಮ ಪಂಚಾಯತಿಯಲ್ಲಿ ೨೦ ಗ್ರಾಮ ಪಂಚಾಯತಿ ಸದಸ್ಯರಲ್ಲಿ ೧೪ ಜನರು ಉಮೇಶ್ ವಿರುದ್ಧ ಅವಿಶ್ವಾಸ ಪತ್ರವನ್ನು ಉಪ ವಿಭಾಗಧಿಕಾರಿಗೆ ನೀಡಿದ್ದರು. ಆದ್ದರಿಂದ ೩-೩-೨೦೨೫ ರಂದು ಅವಿಶ್ವಾಸ ಮಂಡನೆಗೆ ಸಮಯ ನಿಗದಿಯಾಗಿತ್ತು. ಆದ್ದರಿಂದ ಇಂದು ಬೆಳಗ್ಗೆಯಿಂದ ಕೇವಲ ಒಬ್ಬರು ಸದಸ್ಯರು ಮಾತ್ರ ಆಗಮಿಸಿದ್ದರಿಂದ ಅವಿಶ್ವಾಸ ಮಂಡನೆ ವಿಫಲವಾಗಿದೆ.