ಅಹಿಂದ ರಾಜ್ಯ ಸಂಚಾಲಕರಾಗಿ ವಿಜಯ್ ಭರತ್ ನೇಮಕ

News Desk

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಶತಮಾನಗಳಿಂದಲೂ ಶೋಷಿಸಲ್ಪಡುತ್ತಿರುವ ಅಲ್ಪಸಂಖ್ಯಾತ
, ಹಿಂದುಳಿದ ಮತ್ತು ದಲಿತರಿಗೆ ನ್ಯಾಯ ದೊರಕಿಸಿ ಕೊಡಲು `ಅಹಿಂದಚಳುವಳಿಯನ್ನು ಹುಟ್ಟು ಹಾಕಿದ್ದು ಯಾದಗಿರಿ ಜಿಲ್ಲೆಯ ಲಕ್ಷಿö್ಮ ಮಿನರಲ್ ವಾಟರ್ ನ ವಿಜಯ್ ಭರತ್ ಮಾರುತಿರಾವ್ ಇವರನ್ನು ರಾಜ್ಯ ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ.

- Advertisement - 

`ಅಹಿಂದರಾಜ್ಯ ಮುಖ್ಯ ಸಂಚಾಲಕರಾದ ಮೂರ್ತಿ ಸಿದ್ದಯ್ಯ ಈ ಕುರಿತು ಪ್ರಕಟಣೆ ನೀಡಿದ್ದು, ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ. “ಅಹಿಂದ” –ಚಳುವಳಿ ಸಂಘಟನೆಯ ರಾಜ್ಯ ಘಟಕದ ಕಲ್ಯಾಣ ಕರ್ನಾಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

- Advertisement - 

ಅಹಿಂದ ಸಮುದಾಯಗಳ ಬದುಕನ್ನು ಬದಲಾಯಿಸಲು ಮತ್ತು ಸೇವಾ ಭಾವನೆಗಳಿಂದ ಸೇವೆ ಮಾಡಲು, “ಅಹಿಂದ” –ಚಳುವಳಿ ಸಂಘಟಣೆಯ ಬೈಲಾ, ಉದ್ದೇಶಗಳು, ಗುರಿಗಳನ್ನು ಪಾಲಿಸುವುದು, ಅದರಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿರುವ ಮೂರ್ತಿ ಸಿದ್ದಯ್ಯ ಇವರು, ಹೆಚ್ಚುವರಿಯಾಗಿ, ರಾಜ್ಯದ ಕಲ್ಯಾಣ ಕರ್ನಾಟಕಜಿಲ್ಲೆಗಳಾದ ಯಾದಗಿರಿ, ಬಿದರ್, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಂಘಟಣೆಯ ಜಿಲ್ಲಾ ಘಟಕಗಳನ್ನು ರಚನೆ ಮಾಡಲು ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡುವುದು; ರಾಜ್ಯ ಮುಖ್ಯ ಸಂಚಾಲಕರು ಸೂಚಿಸಿದ ಜಿಲ್ಲೆಗಳ ಉಸ್ತುವಾರಿ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.

ರಾಜ್ಯವ್ಯಾಪಿ ಅಹಿಂದ ಸಮುದಾಯಗಳ ಆರ್ಥಿಕಶಕ್ತಿ ವೃದ್ಧಿಗಾಗಿ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಬ್ಯಾಂಕ್ಸ್ಥಾಪನೆ ಮಾಡಲು, ಉದ್ದೇಶಗಳ ಗುರಿಗಳನ್ನು ಜಾರಿಗೊಳಿಸಲು, ಸಮುದಾಯ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಮೂಲಕ ಕ್ರಮವಹಿಸಲು ವಿಜಯ್ ಭರತ್ ಅವರಿಗೆ ಸೂಚಿಸಿ ಈ ಹುದ್ದೆ ನೀಡಿರುವುದಾಗಿ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";