ವಿದ್ಯಾರ್ಥಿಗಳ ವಿಕಸನಕ್ಕೆ ಎನ್ಎಸ್ಎಸ್ ಸಹಕಾರಿ-ವಿಜಯ ಮಾರಹನುಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಆಗುತ್ತವೆ ಎಂದು ಡಾ.ಅಂಬೇಡ್ಕರ್ ವಿದ್ಯಾಕೇಂದ್ರದ ಅಧ್ಯಕ್ಷೆ ವಿಜಯ ಮಾರ ಹನುಮಯ್ಯ ತಿಳಿಸಿದರು.
 

      ಅವರು ದೊಡ್ಡಬಳ್ಳಾಪುರ ಕಸಬಾ ವೀರಾಪುರ ಗ್ರಾಮದಲ್ಲಿ  ಮಾರಸಂದ್ರ ಪಿ ಕೆ ಬಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.   ಶಿಸ್ತುಬದ್ದ   ಜೀವನ ಶೈಲಿ‌ವಿದ್ಯಾರ್ಥಿಗಳಿಗೆ ಬಹುಮುಖ್ಯ.

 ದುರಾಭ್ಯಾಸಗಳು ವಿದ್ಯಾರ್ಥಿಗಳ ಭವಿಷ್ಯವನ್ನು  ಹಾಳು ಮಾಡುತ್ತವೆ.  ವಿದ್ಯಾರ್ಥಿಗಳು ಪಠ್ಯ ವಿಷಯಗಳಿಗೆ ಮಾತ್ರ ಸೀಮಿತ ಆಗಬಾರದು. ಪಠ್ಯೇತರ ಚಟುವಟಿಕೆಗಳಲ್ಲಿ  ತಮ್ಮ ಆಸಕ್ತಿಯನ್ನು ಹೊಂದಬೇಕು.   ಗ್ತಾಮೀಣ ಪ್ರದೇಶದ  ಸಮಕಾಲೀನ ಸಾಮಾಜಿಕ ಮತ್ತು ಸಾಂಸ್ಕೃತಿಕ  ಪರಿಸ್ಥಿತಿಯನ್ನು  ಅರಿಯಲು  ವಿಶೇಷ ಶಿಬಿರಗಳಿಂದ ಅನುಕೂಲವಾಗುತ್ತದೆ ಎಂದರು. 

      ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಸಾದಿಕ್ ಪಾಷ ಮಾತನಾಡಿನಮ್ಮ ಸುತ್ತಮುತ್ತಲ ಪರಿಸರವನ್ನು  ಸ್ವಚ್ಛತೆಯಲ್ಲಿ ಇರುವಂತೆ ಮಾಡುವುದು  ಎಲ್ಲಾ  ನಾಗರಿಕರ ಜವಾಬ್ದಾರಿ. ಶುಚಿತ್ವದಿಂದ ಆರೋಗ್ಯ ವೃದ್ದಿಸುತ್ತದೆ.

ಸ್ವಚ್ಛತೆಯ ಮಹತ್ವ ಕುರಿತು  ಜನಜಾಗೃತಿ ಹೆಚ್ಚಿನ‌ಪ್ರಮಾಣದಲ್ಲಿ ಆಗಬೇಕಾಗಿದೆ.  ವಿಶೇಷ ಸೇವಾ ಶಿಬಿಗಳಲ್ಲಿ ಭಾಗವಹಿಸಿದ್ದ. ಹಲವಾರು  ವಿದ್ಯಾರ್ಥಿಗಳು  ತಮ್ಮ ಮನೆಗಳಲ್ಲಿ ಜೀವನ ಶೈಲಿ ಬದಲಿಸಿ ಕೊಂಡಿದ್ದಾರೆ ಎಂದರು.

       ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ರೇವತಿ  ಮಾತನಾಡಿವಿದ್ಯಾರ್ಥಿ ಜೀವನದ ಹಂತದಲ್ಲಿಯೇ   ಯುವಜನತೆಯು ವಿದ್ಯೆ, ಜ್ಞಾನ ಮತ್ತು ಕೌಶಲ್ಯದ ಮಹತ್ವವನ್ನು  ಸಕಾಲದಲ್ಲಿ ಅರ್ಥ ಮಾಡಿಕೊಳ್ಳಬೇಕು.‌ 

 ನಮ್ಮ ಸುತ್ತಲಿನ ಸಮಾಜದ ಒಳಿತಿಗಾಗಿ   ಬದುಕನ್ನು  ಸಾರ್ಥಕಗೊಳಿಸಬೇಕು. ಮಹಾತ್ಮ ಗಾಂಧೀಜಿಯವರ  ತತ್ತ್ವ  ಮತ್ತು ಆದರ್ಶ ಚಿಂತನೆಗಳ‌ಆಶಯದಂತೆ  ರಾಷ್ಟ್ರೀಯ ಸೇವಾ ಯೋಜನೆ ಅಸ್ತಿತ್ವಕ್ಕೆ ಬಂದಿದೆ.  ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು  ಬದುಕಿನಲ್ಲಿ ಅಳವಡಿಸಿಕೊಂಡರೆ  ಮಹಾತ್ಮ ಗಾಂಧೀಜಿ ಅವರ  ಕನಸು ನನಸಾಗುತ್ತದೆ ಎಂದರು. 

    ಸಮಾರಂಭದಲ್ಲಿ ಡಾ.ಅಂಬೇಡ್ಕರ್ ವಿದ್ಯಾಕೇಂದ್ರದ ಅಧ್ಯಕ್ಷೆ ವಿಜಯ ಮಾರ ಹನುಮಯ್ಯಆಡಳಿತಾಧಿಕಾರಿ ಟಿ.ಎಂ.ಕರಗಯ್ಯ, ಪಿಕೆಬಿ ಪದವಿ ಪೂರ್ವ ಕಾಲೇಜಿನ‌ಪ್ರಾಂಶುಪಾಲ ಎಂ.ಆನಂದರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎ.ಆರ್.ಗಂಗಾಧರೇಶ್ವರ‌ಶಿಬಿರಾಧಿಕಾರಿ ಕೆ.ಆರ್.ಪ್ರಸನ್ನಕುಮಾರ್, ಮಜರಾ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಮೀನಾಸದಸ್ಯರುಗಳಾದ ವಿಮಲಪಿಳ್ಳಾಂಜಪ್ಪ, ವಿ.ಎಂ.ವಿಜಯಕುಮಾರ್, ಲೀಲಮ್ಮ ಪಿಳ್ಳೇಗೌಡ, ವಿ.ಎಂ.ಶಿವಕುಮಾರ್ವೀರಾಪುರ ಗ್ರಾಮದ  ಮುಖಂಡರುಗಳಾದ ಪಿ.ಮುನಿಯಪ್ಪ, ಲಕ್ಷ್ಮೀನಾರಾಯಣ್, ಪಿಳ್ಳೇಗೌಡ, ಬಸವರಾಜು, ಹನುಮಂತಪ್ಪಮುನೇಗೌಡ, ಗಂಗಸಿದ್ದಪ್ಪ, ಸತ್ಯನಾರಾಯಣ್, ಪಿಕೆಬಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಬೋಧಕೇತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";