ತಗಡೂರಿನಲ್ಲಿ ವಿಜಯದಶಮಿ ಸಂಭ್ರಮ ಮತ್ತು ಗಣೇಶೋತ್ಸವ ಸಡಗರ

News Desk

ಚಂದ್ರವಳ್ಳಿ ನ್ಯೂಸ್, ತಗಡೂರು:
ತಗಡೂರಿನಲ್ಲಿ ವಿಜಯದಶಮಿ ಸಂಭ್ರಮ ಮತ್ತು ಗಣೇಶೋತ್ಸವ ಸಡಗರ

ವಿಜಯದಶಮಿ ಹಬ್ಬದ ಅಂಗವಾಗಿ
ಚನ್ನರಾಯಪಟ್ಟಣ ತಾಲೂಕು ತಗಡೂರಿನಲ್ಲಿ ಗಣೇಶೋತ್ಸವ ಮತ್ತು ಸಿದ್ದಲಿಂಗೇಶ್ವರ ಸ್ವಾಮಿ ಉತ್ಸವ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.

- Advertisement - 

ಬನ್ನಿಮಂಟಪದ ಬಳಿ ಲಿಂಗದವೀರರ ಕುಣಿತ, ತಗಡೂರು ಯುವಕರ ಸುಗ್ಗಿ ಕುಣಿತ, ಹಲಗೆ ಕುಣಿತದ ಬಳಿಕ ಮಹಾಮಂಗಳಾರತಿ, ಅಂಬು ಹಾಯುವ ಕಾರ್ಯಕ್ರಮ ನಡೆಯಿತು.

ಶತಮಾನಗಳಿಂದ ನಡೆದುಕೊಂಡು ಬಂದಿರುವ ತತ್ಸಂಪ್ರದಾಯದಂತೆ ಬಾಳೆ ಕಂದಿಗೆ ಬನ್ನಿಗಿಡದ ಬಳಿಯಿಂದ ಗುಂಡು ಹಾರಿಸುವ ಮೂಲಕ ವಿಜಯದಶಮಿ ಆಚರಿಸಲಾಯಿತು.

- Advertisement - 

ತಗಡೂರು ಗ್ರಾಮಸ್ಥರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತರು
ಉತ್ಸವದಲ್ಲಿ ಭಾಗವಹಿಸಿದ್ದರು.

ಮಹಾಪೂಜೆಯ ಬಳಿಕ ಗಣಪತಿ ವಿಸರ್ಜನೆ ಮಾಡಲಾಯಿತು.

Share This Article
error: Content is protected !!
";