ಸಿಜೆ ಗವಾಯಿ ಮೇಲೆ ಶೂ ಎಸೆತ ಖಂಡಿಸಿ ಅ.16ರಂದು ವಿಜಯಪುರ ಬಂದ್

News Desk

ಚಂದ್ರವಳ್ಳಿ ನ್ಯೂಸ್, ವಿಜಯಪುರ:
ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾದ ಸುಪ್ರೀಂಕೋರ್ಟ್ ಸಿಜೆ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಪ್ರಕರಣ. ನ್ಯಾಯವಾದಿಯ ವರ್ತನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಘಟನೆ ಖಂಡಿಸಿ ಅಕ್ಟೋಬರ್ 16 ರಂದು ವಿಜಯಪುರ ನಗರ ಬಂದ್​ಗೆ ಪ್ರಗತಿ ಪರ ಸಂಘಟನೆಗಳು ಮತ್ತು ದಲಿತ ಪರ ಸಂಘಟನೆಗಳಿಂದ ಕರೆ ನೀಡಲಾಗಿದೆ.

ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ರಾಜೂ ಆಲಗೂರು ಹಾಗೂ ವಿವಿಧ ದಲಿತ ಪರ ಪ್ರಗತಿ ಪರ ಸಂಘಟನೆಗಳ ಮುಖಂಡರು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಅಕ್ಟೋಬರ್ 16 ರಂದು ವಿಜಯಪುರ ಬಂದ್​​ ನಿರ್ಧಾರ ತಿಳಿಸಿದರು.

- Advertisement - 

ಕಪ್ಪು ಚುಕ್ಕೆ
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಿಜೆಐ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಕಪ್ಪು ಚುಕ್ಕೆಯಾಗಿದೆ. ಮನುವಾದಿ ಸಂಸ್ಕೃತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜಕ್ಕೆ ನೀತಿ ಪಾಠ ಹೇಳುವ, ಸಿದ್ದಾಂತ ಹೇಳುವ ಆರ್​ಎಸ್​ಎಸ್​ ಹಾಗೂ ಇತರೆ ನಾಯಕರು ಸಿಐಜೆ ಅವರ ಮೇಲೆ ನಡೆದ ಘಟನೆ ಕುರಿತು ಖಂಡಿಸಿಲಿ ಎಂದು ಮುಖಂಡರು ಸವಾಲು ಹಾಕಿದರು.

- Advertisement - 

ದೇಶದ ಪ್ರಧಾನಿ ಮೋದಿ ಅವರು ಘಟನೆ ನಡೆದು 10 ಗಂಟೆಗಳ ಬಳಿಕ ಅನಿವಾರ್ಯವಾಗಿ ಪ್ರತಿಕ್ರಿಯೆ ನೀಡಿದರು. ಅದು ಬಿಹಾರದ ಚುನಾವಣೆ ಕಾರಣ ಮಾತ್ರ ಮಾತನಾಡಿದರು ಎಂದು ಮಾಜಿ ಶಾಸಕ ರಾಜೂ ಆಲಗೂರು ಆರೋಪಿಸಿದರು.
ಅವಕಾಶ ಕೊಟ್ಟರೆ ಸಿಐಜೆ ಗವಾಯಿ ಅವರ ಎದೆ ಸೀಳುತ್ತೇನೆಂದು ಹೇಳಿದ ಕಥಾವಾಚಕರೊಬ್ಬರು ಹೇಳಿದ್ದು ದುರ್ದೈವ ಎಂದು ಮಾಜಿ ಶಾಸಕ ರಾಜೂ ಆಲಗೂರ ಕಿಡಿಕಾರಿದರು.

ಓರ್ವ ಯೂಟ್ಯೂಬರ್ ಸಹ ಸಿಐಜೆ ಗವಾಯಿ ಅವರ ವಿರುದ್ಧ ಮೊದಲಿನಿಂದಲೂ ಅವಮಾನಕಾರಿ ವಿಡಿಯೋ ಹಾಕಿದ್ಧಾನೆಂದು ಆರೋಪ ಮಾಡಿದರು. ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಿರುವ ನ್ಯಾಯವಾದಿ ಹಿಂದೆ ದೊಡ್ಡ ಶಕ್ತಿಯಿದೆ. ಆ ಶಕ್ತಿಯ ಧೈರ್ಯದಿಂದ ಶೂ ಎಸೆದಿದ್ದಾರೆ. ಇದೇ ವೇಳೆ ದಲಿತ ಪರ ಮುಖಂಡರು ಆರ್​​ಎಸ್​ಎಸ್​ ವಿರುದ್ದ ಗುಡುಗಿದರು.

ವಿಜಯಪುರ ಜಿಲ್ಲೆಯ ದಲಿತ ಪರ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಘಟನೆ ಖಂಡಿಸಿ ಅಕ್ಟೋಬರ್ 16 ರಂದು ವಿಜಯಪುರ ಜಿಲ್ಲೆ ಬಂದ್ ಮಾಡಲಾಗುತ್ತದೆ. ಅಂದು ಶಾಲಾ ಕಾಲೇಜು, ಅಂಗಡಿ ಮುಂಗಟ್ಟು ಬಂದ್ ಆಗಲಿದೆ. ಜನರು, ವ್ಯಾಪಾರಿಗಳು, ಸಂಘ ಸಂಸ್ಥೆಗಳು ಸಹಕರಿಸುವಂತೆ ಮುಖಂಡರು ಮನವಿ ಮಾಡಿದರು.

 

 

 

Share This Article
error: Content is protected !!
";