ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ವಸುದೈವ ಕುಟುಂಬಕಂ’ ತತ್ತ್ವವನ್ನು ಜಗತ್ತಿಗೆ ಸಾರಿದ ವಿಜಯಪುರದ ಯುವತಿ. ರಷ್ಯಾದ ಮಾಸ್ಕೋದಲ್ಲಿ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ವಿಜಯಪುರದ ಯುವತಿ ಕು. ಶಿಫಾ ಜಮಾಧಾರ ಅವರು ಭಾರತದ ಏಕೈಕ ಯುವ ಪ್ರತಿನಿಧಿಯಾಗಿ ಪಾಲ್ಗೊಂಡು, ವಿಶ್ವಶಾಂತಿಯ ಸಂದೇಶ ಸಾರಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
‘ವಸುದೈವ ಕುಟುಂಬಕಂ’ ಎಂಬ ಭಾರತೀಯ ಸಂಸ್ಕೃತಿಯ ಆಳವಾದ ತತ್ತ್ವವನ್ನು ಉಲ್ಲೇಖಿಸಿ, ದ್ವೇಷ ಹೆಚ್ಚಿದಾಗ ಯುದ್ಧದ ಬೆದರಿಕೆ ಎದುರಾಗುತ್ತದೆ. ಆದ್ದರಿಂದ ಶಾಂತಿ ಎಂಬುದು ಯುವಜನತೆಯ ಮುಖ್ಯ ಮಂತ್ರವಾಗಬೇಕು ಎಂದು ಅವರು ಕೋರಿದರು.
ರಷ್ಯಾದ ಅಧ್ಯಕ್ಷ ಪುಟಿನ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಾಧ್ಯಕ್ಷರು, ಪ್ರಧಾನಿ ಹಾಗೂ ವಿದೇಶಾಂಗ ಸಚಿವರ ಸಮ್ಮುಖದಲ್ಲಿ ನೀಡಿದ ಅವರ ಮಾತುಗಳು ಭಾರೀ ಸ್ಪಂದನೆ ಮೂಡಿಸಿವೆ.
ವಿಜಯಪುರದ ನೆಲದಿಂದ ಓರ್ವ ಯುವ ಪ್ರತಿಭೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಯ ಸಂದೇಶ ಸಾರಿರುವುದು ಬಸವನಾಡಿಗೂ, ರಾಜ್ಯಕ್ಕೂ, ದೇಶಕ್ಕೂ ಹೆಮ್ಮೆಯ ಸಂಗತಿ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.

