ರಾಜ್ಯಾಧ್ಯಕ್ಷರ ಮರುನೇಮಕ ಯಾವುದೇ ಅನುಮಾನವಿಲ್ಲ-ವಿಜಯೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಮರುನೇಮಕದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಉಳಿದ ಜಿಲ್ಲಾಧ್ಯಕ್ಷರ ಆಯ್ಕೆ ಎರಡು-ಮೂರು ದಿನಗಳಲ್ಲಿ ಆಗಲಿದೆ. ಶೀಘ್ರದಲ್ಲೇ ಹೈಕಮಾಂಡ್​ಗೆ ಜಿಲ್ಲಾಧ್ಯಕ್ಷರ ಪಟ್ಟಿ ರವಾನೆಯಾಗಲಿದೆ ಎಂದು ವಿಜಯೇಂದ್ರ ತಿಳಿಸಿದರು.

ಕೇಂದ್ರದ ವರಿಷ್ಠರ ಗಮನಕ್ಕೆ ಪಕ್ಷದ ಆಂತರಿಕ ಸಮಸ್ಯೆಗಳು ಬಂದಿದೆ. ಯಾರಿಗೆ ನೋಟಿಸ್ ಕೊಡಬೇಕಿತ್ತೋ ಕೊಟ್ಟಾಗಿದೆ. ಅವರು ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಜನರ ಹಿತದೃಷ್ಟಿ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೇಂದ್ರ ನಾಯಕರು ಈ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಅವರು ಹೇಳಿದರು.

ರೆಬೆಲ್‌ಅನ್ನಬೇಡಿ: ರಾಜ್ಯದಲ್ಲಿ ಮತ್ತೊಮ್ಮೆ ಬಲಿಷ್ಠ ಬಿಜೆಪಿ ಪ್ರತಿಷ್ಠಾಪಿಸಲು ಎಲ್ಲರೊಂದಿಗೆ ಒಟ್ಟಾಗಿ ಹೋಗಲು ನಾನು ಸಿದ್ದ. ಎಲ್ಲರೂ ಇದಕ್ಕೆ ಕೈ ಜೋಡಿಸುತ್ತಾರೆ. ಯತ್ನಾಳ್ ತಂಡದವರಿಗೆ ರೆಬೆಲ್ ಅಂತ ಅನ್ನಬೇಡಿ. ಅವರು ಪಕ್ಷ ಸಂಘಟನೆ ಸಭೆ ಮಾಡುತ್ತಿದ್ದಾರೆ ಎಂದು ನಾಳಿನ ರೆಬೆಲ್ ಟೀಂ ಸಭೆಯ ವಿಚಾರಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿದರು.

Share This Article
error: Content is protected !!
";