ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತ ರತ್ನ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮ ಶತಮಾನೋತ್ಸವ ಅಭಿಯಾನದ ಅಂಗವಾಗಿ ಅವರೊಂದಿಗೆ ಕಾರ್ಯ ನಿರ್ವಹಿಸಿದ ಕಾರ್ಯಕರ್ತರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿದ್ದ ನಿಯೋಗವು ಭೇಟಿ ನೀಡುವ ಭಾಗವಾಗಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ತಿಲಕ್‌ನಗರದ ಹಿರಿಯ ಕಾರ್ಯಕರ್ತರಾದ ಸರೋಜಿನಿ ಮುತ್ತಣ್ಣ ಅವರು ಹಾಗೂ
ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಕಾರ್ಯಕರ್ತರಾದ ಕೆ. ಬಿ. ಜಯರಾಮ್‌ಅವರ ನಿವಾಸಗಳಿಗೆ ಭೇಟಿ ನೀಡಿ ಅವರ ಹಾಗೂ ಅಟಲ್ ಜೀ ಅವರೊಂದಿಗಿನ ಭಾವಚಿತ್ರಗಳನ್ನು ವೀಕ್ಷಿಸಿ ಅಂದಿನ ನೆನಪುಗಳ ಕುರಿತು ಅವಲೋಕಿಸಿ,
ಆ ಕಾಲಘಟ್ಟದಲ್ಲಿ ಪಕ್ಷ ಕೈಗೊಂಡ ಹೋರಾಟಗಳು, ಅಭಿಯಾನಗಳು ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತಲ್ಲದೇ, ಅವರುಗಳನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ಉದಯ್ ಗರುಡಾಚಾರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರು ಹಾಗೂ ಶಾಸಕ ಸಿ.ಕೆ ರಾಮಮೂರ್ತಿ, ಅಟಲ್ ಜೀ ಜನ್ಮ ಶತಮಾನೋತ್ಸವ ಅಭಿಯಾನದ ರಾಜ್ಯ ಸಂಚಾಲಕರಾದ ಜಗದೀಶ್ ಹಿರೇಮನಿ, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.