ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ, ರಾಜಕೀಯ ಪಕ್ಷಗಳ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು
, ಈ ಸಂಬಂದ ರಾಜಕೀಯ ಪಕ್ಷಗಳ ಸಭೆ ನಡೆಸಿ ಮಾಹಿತಿ ನೀಡಲಾಯಿತು.

ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ಪೌರಾಯಕ್ತೆ ಎಂ.ರೇಣುಕಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಸಭೆ ನಡೆಸಿ, ಕರಡು ಮತದಾರರ ಪಟ್ಟಿ ಪ್ರಚುರ ಪಡಿಸಿ, ಚುನಾವಣಾ ವೇಳಾಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಯಿತು.

ಚಿತ್ರದುರ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮಪಂಚಾಯಿತಿ ಗೊಲ್ಲರಹಟ್ಟಿ ಕ್ಷೇತ್ರಕ್ಕೆ ಸಾಮಾನ್ಯ (ಮಹಿಳೆ), ಭರಮಸಾಗರ ಗ್ರಾಮಪಂಚಾಯಿತಿ ಭರಮಸಾಗರ-4 ಕ್ಷೇತ್ರಕ್ಕೆ ಸಾಮಾನ್ಯ (ಮಹಿಳೆ), ಹಿರೇಗುಂಟನೂರು ಗ್ರಾಮ ಪಂಚಾಯಿತಿ ಗೊಲ್ಲರಹಟ್ಟಿ ಕ್ಷೇತ್ರ ಸಾಮಾನ್ಯ, ಜಂಪಣ್ಣನಾಯಕನಕೋಟೆ ಗ್ರಾಮ ಪಂಚಾಯಿತಿಯ ಜಂಪಣ್ಣನಾಯಕನಕೋಟೆ-1 ಕ್ಷೇತ್ರಕ್ಕೆ ಸಾಮಾನ್ಯ(ಮಹಿಳೆ) ಹಾಗೂ ಚಿತ್ರದುರ್ಗ ನಗರಸಭೆ ವಾರ್ಡ್ ಸಂಖ್ಯೆ-15ರ ಕ್ಷೇತ್ರಕ್ಕೆ  ಹಿಂದುಳಿದ ವರ್ಗ (ಎ)  ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿದ್ದು, ಈ ಸಂಬಂಧ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ  ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.
ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ: ಚುನಾವಣಾಧಿಕಾರಿಗಳ ಕಚೇರಿ ನಗರಸಭೆ ಕಾರ್ಯಾಲಯ, ಬಿ.ಡಿ.ರೋಡ್‌, ಚಿತ್ರದುರ್ಗ ನಗರ ಇಲ್ಲಿ  ಚುನಾವಣೆ ನಾಮ ಪತ್ರ ಸಲ್ಲಿಕೆ ನಡೆಯಲಿದ್ದು, 2024ರ ನವೆಂಬರ್ 04ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವರು.  ನ.11 ನಾಮ ಪತ್ರ ಸಲ್ಲಿಕೆ ಕೊನೆಯ ದಿನ, ನ.12ರಂದು  ನಾಮಪತ್ರಗಳನ್ನು ಪರಿಶೀಲನೆ, ನ.14 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ನ.23ರಂದು ಚುನಾವಣೆ ಅವಶ್ಯಕತೆ ಇದ್ದರೆ ಚುನಾವಣೆ ನಡೆಯಲಿದೆ. ನ.26 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಗ್ರಾಮ ಪಂಚಾಯಿತಿ ನಾಮಪತ್ರ ಸಲ್ಲಿಕೆ: ಸಂಬಂದಪಟ್ಟ ಗ್ರಾಮ ಪಂಚಾಯಿತಿಗಳು  ಚುನಾವಣಾಧಿಕಾರಿಗಳ ಕಚೇರಿ ಆಗಿರುತ್ತವೆ. 2024 ರ ನ.06ರಂದು ಚುನಾವಣೆ ನಾಮ ಪತ್ರ ಸಲ್ಲಿಕೆ ನಡೆಯಲಿದೆ. ನ.12  ನಾಮ ಪತ್ರ ಸಲ್ಲಿಕೆ ಕೊನೆಯ ದಿನ. ನ.13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.15  ಉಮೇದು ವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ನ.23 ರಂದು ಚುನಾವಣೆ ಅವಶ್ಯಕತೆ ಇದ್ದರೆ ಚುನಾವಣೆ ನಡೆಯಲಿದೆ. ನ.26ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

- Advertisement -  - Advertisement -  - Advertisement - 
Share This Article
error: Content is protected !!
";