ನಿವೇಶನ ಹಂಚಿಕೆ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಇಂದಿಗೂ ಜನರ ಸ್ಥಿತಿಯನ್ನು ಹೇಳಲು ಸಾಧ್ಯವಿಲ್ಲ  ಕಾರಣ ಚಿಕ್ಕ ಚಿಕ್ಕ ಗುಡಿಸಲು, ಮತ್ತು ಮನೆಯಲ್ಲಿ ಮೂರು-ನಾಲ್ಕು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ, ನಿರಾಶ್ರಿತರಿಗಾಗಿ, ಕಡುಬಡವರಿಗಾಗಿ ಸರ್ಕಾರವು ಅಶ್ರಯ ಯೋಜನೆಯಡಿ ಜಾಗ ಮಂಜೂರು ಮಾಡಿದ್ದರು..ನಿವೇಶನ ಹಂಚಿಕೆ ಮಾಡಲು ಪಂಚಾಯಿತಿ  ಮನಸ್ಸು ಮಾಡಿಲ್ಲ… ಸರ್ಕಾರವು ನಿವೇಶನ ಮಂಜೂರು ಮಾಡಿ ವರ್ಷಗಳೇ ಕಳೆದರು ಫಲನುಭವಿಗಳಿಗೆ ಮಾತ್ರ ನಿವೇಶನ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ 2 ಸಾವಿರ ವರ್ಷಗಳ ಇತಿಹಾಸವಿರುವ ಐತಿಹಾಸಿಕ ಗ್ರಾಮ, ಬೆಂಗಳೂರು ಮಾಹಾನಗರಕ್ಕೆ 50 ಕಿ.ಮೀ ಅಂತರದಲ್ಲಿರುವ ಈ ಗ್ರಾಮ  ದೊಡ್ಡಬಳ್ಳಾಪುರ ನಗರಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ ಅಷ್ಟೇ ಜೊತೆಗೆ ಇದು ಕಸಬಾ ಹೋಬಳಿಯ ಮುಖ್ಯ ಕೇಂದ್ರ ಕೂಡ ಹೌದು, ಗ್ರಾಮದಲ್ಲಿ ಸುಮಾರು 700ಕ್ಕೂ ಹೆಚ್ಚು ಕುಟುಂಬಗಳಿದ್ದು 3 ಸಾವಿರಕ್ಕೂ ಹೆಚ್ಚು  ಜನರು ವಾಸವಾಗಿದ್ದಾರೆ, ಗ್ರಾಮದಲ್ಲಿನ ಬಹುತೇಕ ಕುಟುಂಬಗಳಿಗೆ ಇರಲು ಸುಸರ್ಜಿತ ವಸತಿಯ ವ್ಯವಸ್ಥೆ ಇಲ್ಲ  ಎಂಬುದೇ ವಿಪರ್ಯಾಸ .

 ಸಣ್ಣ ಸಣ್ಣ ಮನೆಗಳಲ್ಲಿ  ಮೂರು – ನಾಲ್ಕು ಕುಟುಂಬಗಳು ವಾಸಮಾಡುತ್ತಿವೆ, ರಾತ್ರಿಯಾದರೆ ನಿದ್ರಿಸಲು ಜಾಗ ಹುಡುಕುವಂತಾಗಿದೆ. ಗ್ರಾಮದ ಸರ್ವೆ ನಂಬರ್ 193ರಲ್ಲಿ ಅಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗಾಗಿ  4 ಎಕರೆ ಜಾಗ ಮಂಜುರಾಗಿದೆ, 22 ವರ್ಷಗಳಾದರು ಬಡವರು ಮತ್ತು ನಿರ್ಗತಿಕರಿಗೆ ನಿವೇಶನ ಹಂಚಿಕೆ ಮಾಡಿಲ್ಲ, ಈಗಾಗಲೇ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಜಾಗಗಳು ಅಭಿವೃದ್ಧಿ ಹೆಸರಲ್ಲಿ ಸ್ವಾಧೀನ ಮಾಡಲಾಗುತ್ತಿದೆ,

ಈ ಜಾಗ ಸಹ ಸ್ವಾಧೀನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಒಂದೇ ವೇಳೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಹೋರಾಟಕ್ಕೆ ಇಳಿಯುವುದ್ದಾಗಿ ಭಾರತೀಯ ಕಿಸಾನ್ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜಘಟ್ಟ ಎಚ್ಚರಿಕೆಯನ್ನ ನೀಡಿದ್ದಾರೆ.

ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಜಘಟ್ಟ ನಾರಾಯಣಸ್ವಾಮಿ, 22 ವರ್ಷಗಳ ಹಿಂದೆಯೇ ಸಂಸದರಾಗಿದ್ದ ಆರ್ ಎಲ್ ಜಾಲಪ್ಪ, ಶಾಸಕರಾದ ನರಸಿಂಹಸ್ವಾಮಿಯವರ ಪ್ರಯತ್ನದಿಂದ ನಿವೇಶನಕ್ಕಾಗಿ 4 ಎಕರೆ ಮಂಜೂರಾಗಿತ್ತು, ಆನಂತರ ರಾಜಘಟ್ಟ ಗ್ರಾಮ ಪಂಚಾಯಿತಿ ಅಧಿಕಾರವನ್ನ ಜೆಡಿಎಸ್ ಪಕ್ಷ ಹಿಡಿದಿದ್ದು, ನಿವೇಶನ ಹಂಚಿಕೆ ಮಾಡಿದ್ದಲ್ಲಿ, ಅದರ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೆ ಅನ್ನುವ ಕಾರಣಕ್ಕೆ ಜೆಡಿಎಸ್ ಅಡ್ಡಗಾಲು ಹಾಕುತ್ತಿದೆ, ಎಲ್ಲ ಸಮುದಾಯದಲ್ಲೂ ಬಡವರಿದ್ದು, ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಲು ನಮ್ಮ ಸಹಕಾರ ಸದಾ ಇರುವುದ್ದಾಗಿ ಹೇಳಿದರು. 

ಇದೇ ವೇಳೆ ರಾಜಘಟ್ಟ ಗ್ರಾಮಾಭಿವೃದ್ಧಿ ಯುವ ಸೇನೆಯ ಕಾರ್ಯಕರ್ತರಾದ ವಿನಯ್, ನವೀನ್,ಸಾಗರ್, ರವಿ, ಗಗನ್, ಅನಂತ್, ಪ್ರಮೋದ್, ಆನಂದ್ ಇದ್ದರು.

- Advertisement -  - Advertisement - 
Share This Article
error: Content is protected !!
";