ಚಂದ್ರವಳ್ಳಿ ನ್ಯೂಸ್, ಪಾವಗಡ:
ಕೂಲಿ ಕಾರ್ಮಿಕರು ಮಾಡುವಂತಹ ಕೆಲಸವನ್ನು ಜೆಸಿಬಿ ಮೂಲಕ ಮಾಡಿಸಲಾಗುತ್ತಿದೆ ಎಂದು ವಿರೋಧಿಸಿ ಪಾವಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ಅವರಿಗೆ ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೋಟ ಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಕೆರೆ ಗ್ರಾಮದ ಗ್ರಾಮಸ್ಥರು ಶುಕ್ರವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿದರು.
ಗ್ರಾಮದ ಮುಖಂಡ ನಾಗರಾಜ್ ಮಾತನಾಡಿ ಕೆಲ ದಿನಗಳ ಹಿಂದೆ ನಾವು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನರೇಗಾ ಕೆಲಸಗಳನ್ನ ಜೆಸಿಬಿ ಮೂಲಕ ಮಾಡಿಸಲಾಗುತ್ತಿದ್ದು ಅವರ ವಿರುದ್ಧ ಫೋಟೋ ವಿಡಿಯೋಗಳ ಸಮೇತ ನಾವು ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಓ ಕಚೇರಿಗೆ ಹೋಗಿ ಇ ಓ ಜಾನಕಿ ರಾಮ್ ಅವರನ್ನು ಪ್ರಶ್ನಿಸಿದಾಗ ಏಕವಚನದಲ್ಲಿ ಮಾತನಾಡಿ ಅನಗತ್ಯವಾದ ಉತ್ತರ ನೀಡಿದ್ದಾರೆ. ಜೆಸಿಪಿಗಳಿಂದ ಕಾಮಗಾರಿ ನಿರ್ವಹಿಸಿದರೂ ಅವರಿಗೆ ಬಿಲ್ ಪಾಸ್ ಮಾಡುತ್ತೇನೆ, ನೀವು ಅದೇನು ಮಾಡ್ಕೊಂತಿರೋ ಮಾಡ್ಕೊಳ್ಳಿ ಎಂದು ಇಓ ಜಾನಕಿ ರಾಮ್ ಪ್ರತಿಕ್ರಿಯೆ ನೀಡುವ ಮೂಲಕ ನರೇಗಾ ಮಾನದಂಡಗಳನ್ನು ಗಾಳಿಗೆ ತೂರಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿ ಮಾಡಿರುವ ಅಕ್ರಮದಲ್ಲಿ ಪಿಡಿಒ ಭವ್ಯ, ಎನರ್ಜಿ ನೆರೇಗಾ ಇಂಜಿನಿಯರ್ ಅಶ್ವಿನಿ, ಕಂಪ್ಯೂಟರ್ ಆಪರೇಟರ್ ಯಶು, ಕಾರ್ಯನಿರ್ವಹಣಾ ಅಧಿಕಾರಿ ಜಾನಕಿ ರಾಮ್ ಅವರು ಶಾಮೀಸು ಆಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹ ಮಾಡಿದರು.
ಪ್ರತಿಭಟನೆಯಲ್ಲಿ ರಾಜಕುಮಾರ್, ಮಂಜುನಾಥ್, ನಾಗಾರ್ಜುನ್, ಮಂಜೇಶ್, ಭಾಸ್ಕರ್, ಪ್ರದೀಪ್, ರಮೇಶ್, ನಾಗರಾಜು ಮತ್ತಿತರರಿದ್ದರು.