ದಿಂಡಾವರದ ಕೆರೆ ಭರ್ತಿಗಾಗಿ ಹೋಮ ವಿಶೇಷ ಪೂಜೆ ನಡೆಸಿದ ಗ್ರಾಮಸ್ಥರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಳೆದ 25 ವರ್ಷಗಳಿಂದಿನಿಂದ ಇಲ್ಲಿಯ ತನಕ ಕೇವಲ ಮೂರರಿಂದ ನಾಲ್ಕು ಬಾರಿ ದಿಂಡಾವರ ಕೆರೆ ತುಂಬಿದ್ದು ಸತತ ಬರಗಾಲಕ್ಕೆ ಒಳಗಾದ ದಿಂಡಾವರದ ಜನತೆ ಋಷಿ ಶೃಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ಹೋಮವನ್ನು ಮಂಗಳವಾರ ಮಾಡಿಸಿದ್ದಾರೆ.

- Advertisement - 

 ದಿಂಡಾವರ ಗ್ರಾಮದ ಯಾವುದೇ ಜಾತಿ ಜನಾಂಗಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರು ಸೇರಿ ದಿಂಡಾವರ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಹೋಮದ ಪ್ರಯುಕ್ತ ಕನಿಷ್ಠ ಒಂದೊಂದು ರೂಪಾಯಿಗಳನ್ನು ಸ್ವೀಕರಿಸಿ ಈ ಹೋಮ ಮಾಡಲಾಗಿದೆ.

- Advertisement - 

 ಋಷಿ ಶೃಂಗಿ ಮಹರ್ಷಿಗಳು ರಾಮಾಯಣದಲ್ಲಿ ದಶರಥ ಮಹಾರಾಜರಿಗೆ ಪುತ್ರ ಕಾಮಿಸ್ಟಿಯಾಗವನ್ನು ಮಾಡಿರುತ್ತಾರೆ. ಹಾಗೂ ಮಹರ್ಷಿಗಳು ಓದಲ್ಲೆಲ್ಲ ಮಳೆ ಬೆಳೆ ಸುಸೂತ್ರವಾಗಿ ಆಗುತ್ತದೆ ಎಂಬ ನಂಬಿಕೆಯಲ್ಲಿ ಇಡೀ ರಾಜ್ಯವೇ ಈ ದೇವಸ್ಥಾನಕ್ಕೆ ಶಿರಬಾಗುವುದನ್ನು ನಾವು ನೋಡುತ್ತಾ ಬಂದಿರುತ್ತೇವೆ.

ಈ ಸಂದರ್ಭದಲ್ಲಿ ಚಂದ್ರಗಿರಿ ದಿಂಡಾವರ ನಾರಾಯಣಸ್ವಾಮಿ, ಸುರೇಶ್ ಗೌಡ, ಶ್ರೀನಿವಾಸ್ ಹೆಚ್ಜೆ, ಗ್ರಾಮ ಪಂಚಾಯತಿ ಸದಸ್ಯ ವಿರೂಪಾಕ್ಷಪ್ಪ ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ಕೂಡಿ ಹೋಮ ಮಾಡಿಸುತ್ತಿರುತ್ತಾರೆ.

- Advertisement - 

ಎಲ್ಲಾ ಋಷಿಮುನಿಗಳು ಹಾಗೂ ಭಕ್ತರು ಭಗವಂತನಲ್ಲಿ ಲೀನವಾದರೆ ಇಲ್ಲಿ ಇಲ್ಲಿ ಭಗವಂತನಾದ ಮಹಾದೇವ ಋಷಿ ಶೃಂಗಿ ಮಹರ್ಷಿಗಳಲ್ಲಿ ಲೀನವಾಗಿರುವ  ಭಾರತದಲ್ಲಿ ಇರುವ ಏಕೈಕ ದೇವಾಲಯ ಇದಾಗಿದೆ ಎಂದು ಭಕ್ತ ಗ್ರಾಮಸ್ಥರ ಅಭಿಪ್ರಾಯವಾಗಿದೆ.

Share This Article
error: Content is protected !!
";