ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ೨೦೨೫-೨೮ನೇ ಅವಧಿಯ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಜಿಲ್ಲಾಧ್ಯಕ್ಷರಾಗಿ ಬಿ.ಎಸ್.ವಿನಾಯಕ ತೊಡರನಾಳ್ ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ ಎಂ.ಎನ್.ಅಹೋಬಳಪತಿ, ನಾಗತಿಹಳ್ಳಿ ಮಂಜುನಾಥ್, ಸಿ.ಪಿ.ಮಾರುತಿ. ಪ್ರಧಾನ ಕಾರ್ಯದರ್ಶಿಯಾಗಿ ವಿ.ವೀರೇಶ್ (ಅಪ್ಪು), ಜಿಲ್ಲಾ ಖಜಾಂಚಿಯಾಗಿ ಡಿ.ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿಯಾಗಿ ನಾಕಿಕೆರೆ ತಿಪ್ಪೇಸ್ವಾಮಿ, ವಿ.ಚಂದ್ರಪ್ಪ, ಎಚ್.ತಿಪ್ಪೇಸ್ವಾಮಿ, ರಾಜ್ಯ ಸಮಿತಿ ಸದಸ್ಯರಾಗಿ ಎಸ್.ಸಿದ್ದರಾಜು ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಎಸ್.ಅಮಿತ್, ಸಿ.ಎನ್.ಕುಮಾರ್, ಎಚ್.ಸಿ.ಗಿರೀಶ್, ಚೌಳೂರು ಮಂಜುನಾಥ, ಜಡೇಕುಂಟೆ ಮಂಜುನಾಥ, ಟಿ.ಜೆ.ತಿಪ್ಪೇಸ್ವಾಮಿ, ಟಿ.ದರ್ಶನ್, ಎಸ್.ಟಿ.ನವೀನ್ಕುಮಾರ್, ಎಚ್.ಟಿ.ಪ್ರಸನ್ನ, ಜಿಒಎನ್ ಮೂರ್ತಿ, ಎಸ್.ಬಿ.ರವಿಕುಮಾರ್ (ಉಗ್ರಾಣ), ರವಿಮಲ್ಲಾಪುರ, ಎಸ್.ರಾಜಶೇಖರ, ವಿಶ್ವನಾಥ, ಕೆ.ಜಿ.ವೀರೇಂದ್ರಕುಮಾರ್ ಗೆಲುವು ಸಾಧಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಪ್ಪನಹಳ್ಳಿ ಷಣ್ಮುಖ ತಿಳಿಸಿದ್ದಾರೆ.

