ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ವಿಪ ಶಾಸಕ ಸಿ.ಟಿ ರವಿ ಅಧಿಕಾರ ಸ್ವೀಕಾರ

News Desk
- Advertisement -  - Advertisement -  - Advertisement - 

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ವಿಪ ಶಾಸಕ ಸಿ.ಟಿ ರವಿ ಅಧಿಕಾರ ಸ್ವೀಕಾರ
ಚಂದ್ರವಳ್ಳಿ ನ್ಯೂಸ್
, ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಅವರು ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸಿದೆರು.

ನಂತರ ಮಾತನಾಡಿದ ಸಿಟಿ ರವಿ ಅವರು, ಅಧ್ಯಕ್ಷ ಸ್ಥಾನವೆಂಬುದು ಕೇವಲ ಹುದ್ದೆಯಲ್ಲ, ಇದು ನನ್ನ ಮೇಲಿನ ಮಹತ್ತರ ಜವಾಬ್ದಾರಿ. ಸಹಕಾರ ತತ್ವಗಳನ್ನು ಬಲಪಡಿಸಿ, ಸಹಕಾರಿ ಸದಸ್ಯರು ಹಾಗೂ ರೈತರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.

- Advertisement - 

ಬ್ಯಾಂಕಿನ ಆರ್ಥಿಕ ಬಲವರ್ಧನೆ, ಪಾರದರ್ಶಕ ಆಡಳಿತ ಮತ್ತು ಸಮಗ್ರ ಅಭಿವೃದ್ಧಿಯ ಮೂಲಕ ಜನಸಾಮಾನ್ಯರಿಗೆ ವಿಶ್ವಾಸಾರ್ಹ ಸಂಸ್ಥೆಯಾಗಿ ರೂಪಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಹಕರಿಸಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ರವಿ ಅವರು ಸಲ್ಲಿಸಿದರು.

- Advertisement - 
Share This Article
error: Content is protected !!
";