ವಿಶ್ವಕರ್ಮರು ಜಗತ್ತು ಸೃಷ್ಠಿಸಿದ ಭಾಗ್ಯಶಾಲಿಗಳು- ಶಿಕ್ಷಕ ರಾಘವೇಂದ್ರಚಾರ್

News Desk

ವಿಶ್ವಕರ್ಮರು ಜಗತ್ತು ಸೃಷ್ಠಿಸಿದ ಭಾಗ್ಯಶಾಲಿಗಳು- ಶಿಕ್ಷಕ ರಾಘವೇಂದ್ರಚಾರ್
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶ್ವಕರ್ಮರು ವಿಶ್ವ, ಜಗತ್ತು, ನಾಡಿಗೆ ಭವ್ಯ ರೂಪ ಕಲ್ಪಿಸಿದ ಭಾಗ್ಯಶಾಲಿಗಳು. ಕಣ್ಣಿಗೆ ಕಾಣುವ ಯಾವುದೇ ಭವ್ಯತೆಯಲ್ಲಿ ವಿಶ್ವಕರ್ಮರ ಪ್ರಯತ್ನವಿದೆ. ಜಗತ್ತಿನ ಸುಂದರತೆಗೆ ಕಾರಣ ವಿಶ್ವಕರ್ಮರು ಎಂದು ಹಿರಿಯೂರು ತಾಲ್ಲೂಕು ಗನ್ನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಘವೇಂದ್ರಚಾರ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವಿಶ್ವಕರ್ಮ ಅಂದರೆ ಎಲ್ಲವನ್ನೂ ಸಾಧಿಸಿದವನು ಎಂದಾಗಿದೆ. ಜಗತ್ತಿನ ಸೃಷ್ಠಿಕರ್ತನೇ ವಿಶ್ವಕರ್ಮವಾಗಿದ್ದಾನೆ. ಯಾವುದೇ ವಸ್ತು, ವ್ಯಕ್ತಿಯಾಗಲಿ, ಕಾಲಕ್ರಮೇಣ ಬಳಸದೇ ಇದ್ದರೆ ಅದು ನಶಿಸಿ ಹೋಗುತ್ತದೆ. ನಾವು ವಿಶ್ವಕರ್ಮನ ಅಸ್ತಿತ್ವ ಅರ್ಥ ಮಾಡಿಕೊಳ್ಳದಿದ್ದರೆ ವಿಶ್ವಕರ್ಮ ಎಂಬ ಪದ ಕೇವಲ ಜಾತಿಗೆ ಸೀಮಿತವಾಗಲಿದೆ. ವಿಶ್ವಕರ್ಮ ಎಂಬುದು ಒಂದು ಜಾತಿಯಲ್ಲ. ಅದು ಒಂದು ಸೃಷ್ಠಿ. ಬೆಳವಣಿಗೆ. ಈ ಜಗತ್ತು ಸೃಷ್ಠಿ ಮಾಡಿದ ಸೃಷ್ಠಿಕರ್ತನ ಹೆಸರೇ ವಿಶ್ವಕರ್ಮ. ಬ್ರಹ್ಮಾಂಡದ ಸೃಷ್ಠಿಕರ್ತನಾದ ವಿಶ್ವಕರ್ಮನಿಗೆ ನಾವೆಲ್ಲರೂ ನಿತ್ಯವೂ ಹೃತ್ಪೂರ್ವಕ, ಭಕ್ತಿಪೂರ್ವಕ ನಮನ ಸಲ್ಲಿಸುವುದರಿಂದಲೇ ಜಗತ್ತು ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಲನ್ನು ದೇವರ ಮೂರ್ತಿಯಾಗಿ ಕೆತ್ತುವ, ಯಾವುದೇ ಲೋಹವನ್ನು ಒಂದು ಸೌಂದರ್ಯ ವಸ್ತುವನ್ನಾಗಿ ಮಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ಸಮಾಜ ವಿಶ್ವಕರ್ಮ ಸಮಾಜ. ಯಾವುದು ಅಮೂರ್ತ ರೂಪದಲ್ಲಿರುತ್ತದೆಯೋ, ಯಾವುದು ಅದರ ಯಾವುದೇ ರೂಪವನ್ನು ಒಳಗೊಂಡಿರುವುದಿಲ್ಲವೋ ಅಂತಹ ವಸ್ತು ತೆಗೆದುಕೊಂಡು ಅದಕ್ಕೊಂದು ಮೌಲ್ಯ, ಬೆಲೆ ಬರುವಂತಹ ಕೆಲಸವನ್ನು ವಿಶ್ವಕರ್ಮ ಸಮಾಜ ಮಾಡಲಿದೆ. ಇದು ವಿಶ್ವಕರ್ಮರು ಮಾಡುವ ವೃತ್ತಿ ಎಂದು ಹೇಳಿದರು.

ವಿಶ್ವಕರ್ಮನ ಐದು ಮುಖಗಳು ಜಗತ್ತಿನ ಸೃಷ್ಠಿಗೆ ಕಾರಣವಾಗಿರುವ ಪಂಚಭೂತಗಳನ್ನು ನೆನಪಿಸುತ್ತದೆ. ಇದು ಅಗ್ನಿ, ನೀರು, ಆಕಾಶ, ಭೂಮಿ ಮತ್ತು ವಾಯು ಇವು ವಿಶ್ವದ ಬ್ರಹ್ಮಾಂಡದ ಐದು ತತ್ವಗಳನ್ನು ಹೇಳುತ್ತವೆ. ಪಂಚಮುಖಗಳು, ಪಂಚಭೂತಗಳು, ಪಂಚತತ್ವಗಳೇ ನಾವು ಕಾಣುವ ದೇವರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ.ಸುರೇಶಾಚಾರ್ಯ, ಉಪಾಧ್ಯಕ್ಷ ಎಸ್.ಕೃಷ್ಣಾಚಾರ್, ಪ್ರಧಾನಕಾರ್ಯದರ್ಶಿ ಎ.ಗೋವರ್ಧನಾಚಾರ್, ಮುಖಂಡರಾದ ಶಿವಣ್ಣಾಚಾರ್, ಮಲ್ಲಿಕಾರ್ಜುನಾಚಾರ್, ಶಿಲ್ಪಿ ಸುರೇಶಾಚಾರ್, ಷಣ್ಮುಖಚಾರ್, ಪದ್ಮಾಕಾಳಾಚಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಶ್ರೀರಾಮ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಹೊಸದುರ್ಗದ ಸರಸ್ವತಿ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

ಸಂಸದರಿಂದ ಮೆರವಣಿಗೆಗೆ ಚಾಲನೆ:
ವಿಶ್ವಕರ್ಮ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಬುರುಜನಹಟ್ಟಿಯ ಕೋಟೆ ಆಂಜನೇಯ ದೇವಸ್ಥಾನದಿಂದ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆಗೆ ಸಂಸದ ಗೋವಿಂದ ಎಂ ಕಾರಜೋಳ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ, ತರಾಸು ರಂಗಮಂದಿರ ತಲುಪಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

- Advertisement -  - Advertisement - 
Share This Article
error: Content is protected !!
";