ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ- ವಿಶ್ವನಾಥ್

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಕುರಿತು ಶ್ವೇತಪತ್ರ ಹೊರಡಿಸಿ
, ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನ ಬಹಿರಂಗ ಪಡಿಸಬೇಕೆಂದು ವಿಧಾನ ಪರಿಷತ್‌ಶಾಸಕ ಹೆಚ್. ವಿಶ್ವನಾಥ್‌ಆಗ್ರಹಿಸಿದ್ದಾರೆ.

ನಗರದ ಜಲದರ್ಶನಿ ಅತಿಥಿ ಗೃಹದಲ್ಲಿ ಗುರುವಾರ ಅವರು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ದಿವಾಳಿ ಹಂಚಿಗೆ ತಲುಪಿರುವ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದರೂ ಹುಚ್ಚು ಹುಚ್ಚಾಗಿ ಹಣ ಖರ್ಚು ಮಾಡುತ್ತಿದ್ದಾರೆ.

ಆಡಳಿತದಲ್ಲಿ ಬಿಗಿ ಹಿಡಿತ ಇಲ್ಲದ ಕಾರಣ ಐಎಎಸ್‌ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್‌ಅಧಿಕಾರಿ ಡಿ.ರೂಪಾ ಬೀದಿ ಜಗಳ ರಂಪಾಟವಾದಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಅವರು ಕಿಡಿಕಾರಿದರು.

ಪ್ರಿನ್ಸೆಸ್‌ ರಸ್ತೆ ಜಟಾಪಟಿ:
ಕೆಆರ್​ಎಸ್ ರಸ್ತೆಗೆ ಪ್ರಿನ್ಸೆಸ್​ ಎಂಬ ಹೆಸರಿನ ಬಗ್ಗೆ ಹಲವು ರೀತಿಯ ದಾಖಲೆಗಳಿವೆ. ಪ್ರಿನ್ಸೆಸ್‌ರಸ್ತೆ ಹೆಸರಿನ ಬದಲಿಗೆ ಸಿದ್ದರಾಮಯ್ಯನವರ ಹೆಸರನ್ನ ಇಡಲು ಹೋಗಿ ಸಿದ್ದರಾಮಯ್ಯ ಬೆಂಬಲಿಗರು ಅವರ ಹೆಸರನ್ನ ಕೆಡಿಸಲು ಹೊರಟಿದ್ದಾರೆ. ಈ ರೀತಿಯ ಅಪಮಾನ ಸಿದ್ದರಾಮಯ್ಯನವರಿಗೆ ಬೇಡ. ಜನ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ. ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ಈ ವಿಚಾರ ಇಲ್ಲಿಗೆ ಬಿಡದಿದ್ದರೆ ಸಿದ್ದರಾಮಯ್ಯ ಬೆಂಬಲಿಗರು ಮೈಸೂರಿನಲ್ಲಿ ಮತ್ತೊಮ್ಮೆ ನಿಮ್ಮ ಹೆಸರನ್ನು ಕೆಡಿಸುತ್ತಾರೆ ಎಂದು ಹೆಚ್​ ವಿಶ್ವನಾಥ್​ ಕಿವಿ ಮಾತು ಹೇಳಿದ್ದಾರೆ.

ಅರಸರ ಬಗ್ಗೆ ಮಾತುಬೇಡ:
ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್‌ಅವರ ಸಂಸದ ಯದುವೀರ್‌ನಕಲಿ ಮಹಾರಾಜ ಎನ್ನುವ ಹೇಳಿಕೆಗೆ ವಿಶ್ವನಾಥ್‌ ತಿರುಗೇಟು ನೀಡಿ
, ಈ ರೀತಿಯ ಟೀಕೆ ಮಾಡುವುದರಿಂದ ಲಕ್ಷ್ಮಣ್‌ಅವರಿಗೆ ಒಳ್ಳೆಯದು ಆಗುವುದಿಲ್ಲ. ಮೈಸೂರಿನ ಯದುವಂಶ ಅರಸರ ಬಗ್ಗೆ ನೀವು ಮಾತನಾಡಿದರೆ ನೀವೇ ಚೀಪ್‌ಆಗುತ್ತೀರಾ ಹೊರತು, ಮೈಸೂರು ಅರಸರಿಗೆ ಏನೂ ಆಗುವುದಿಲ್ಲ. ಇದೇ ತಿಂಗಳು ಜನವರಿ 7 ರಂದು ಅಮಿತ್‌ಶಾ ಹೇಳಿಕೆ ಕುರಿತು ಮೈಸೂರು ಬಂದ್​ಗೆ ಕರೆ ನೀಡಿದ್ದು, ಇದಕ್ಕೆ ನನ್ನ ಬೆಂಬಲ ಇದೆ ಎಂದು ವಿಶ್ವನಾಥ್ ತಿಳಿಸಿದರು.

ನಟ ಶಿವರಾಜ್‌ಕುಮಾರ್‌ಅವರು ಕ್ಯಾನ್ಸರ್​ ರೋಗಕ್ಕೆ ಯಶಸ್ವಿ ಚಿಕಿತ್ಸೆ ಪಡೆದಿದ್ದು ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುವುದಾಗಿ ಹೆಚ್​ ವಿಶ್ವನಾಥ್ ಹೇಳಿದರು.

 

- Advertisement -  - Advertisement - 
Share This Article
error: Content is protected !!
";