ದೂರದೃಷ್ಟಿ ಜನಸ್ನೇಹಿ ಚಿಂತಕ ವಿಶ್ವೇಶ್ವರಯ್ಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ
, ಲಯನ್ಸ್‌ಕ್ಲಬ್‌ಆಫ್‌ಆರ್‌ಎಲ್‌ಜೆಐ ಸಹಯೋಗದಲ್ಲಿ ಸೋಮವಾರ ರಾಷ್ಟ್ರೀಯ ಅಭಿಯಂತರರ ದಿನವನ್ನು ಆಚರಿಸಲಾಯಿತು.

ಶ್ರೀ ದೇವರಾಜ್‌ಅರಸ್‌ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

- Advertisement - 

ಬಳಿಕ ಮಾತನಾಡಿದ ಅವರು, ದೂರದೃಷ್ಟಿ ಹಾಗೂ ಜನಸ್ನೇಹಿ ಚಿಂತನೆಗಳಿಂದ ವಿಶ್ವೇಶ್ವರಯ್ಯನವರು ನಾಡಿನ ಎಲ್ಲ ವರ್ಗಗಳ ಆಶಾಕಿರಣ ಎನಿಸಿದ್ದಾರೆ. ಮುದ್ದೇನಹಳ್ಳಿಯಲ್ಲಿ ಜನಿಸಿ ಜಗತ್ತೇ ನಿಬ್ಬೆರಗಾಗುವಂತೆ ತಮ್ಮ ಯೋಜನೆಗಳ ಮೂಲಕ ದೇಶ ಸೇವೆಯನ್ನು ಮಾಡಿದ ಅವರ ಬದುಕು ಎಲ್ಲಿಗೂ ಮಾದರಿಯಾಗಿದೆ. ತೀಕ್ಷ್ಣ ಆಲೋಚನೆಗಳು ಹಾಗೂ ಜನೋಪಯೋಗಿ ಕೆಲಸಗಳಿಂದ ಒಬ್ಬ ಅಭಿಯಂತರ ಹೇಗೆ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು ಎಂಬುದಕ್ಕೆ ಅವರೇ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ್‌ ಕಾರ್ತಿಕ್‌ಮಾತನಾಡಿ, ಎಂಜಿನಿಯರ್‌ಗಳಿಗೆ ವಿಶ್ವೇಶ್ವರಯ್ಯ ಮಾದರಿ. ಅವರ ಸಮಯಪ್ರಜ್ಞೆ, ಕಾರ್ಯತಂತ್ರ ಮತ್ತು ಅನುಷ್ಠಾನದ ವೈಖರಿ ಎಲ್ಲ ಹಂತಗಳಲ್ಲೂ ಗಮನ ಸೆಳೆಯುತ್ತದೆ ಎಂದರು.

- Advertisement - 

ಡೀನ್‌ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ವಿಶ್ವೇಶ್ವರಯ್ಯನವರು ಕೇವಲ ಸಿವಿಲ್‌ಇಂಜಿನಿಯರ್‌ಮಾತ್ರವಲ್ಲದೆ, ತಾಂತ್ರಿಕ ಕೌಶಲ್ಯದ ವಿವಿಧ ಆಯಾಮಗಳನ್ನು ಬಲ್ಲ ಬುದ್ದಿಜೀವಿಯಾಗಿದ್ದರು. ದೇಶ ಸೇವೆಯನ್ನು ಕರ್ತವ್ಯದ ಭಾಗವಾಗಿ ಪರಿಗಣಿಸಿದ್ದರು ಎಂದು ತಿಳಿಸಿದರು.

ಲಯನ್ಸ್‌ಕ್ಲಬ್‌ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ವಿಶ್ವೇಶ್ವರಯ್ಯನವರು ನಿರ್ಮಿಸಿದ ಘಾಟಿ ಸುಬ್ರಹ್ಮಣ್ಯ ಪಿಕಪ್‌ಡ್ಯಾಂ ಮತ್ತು ಜಕ್ಕಲ ಮಡಗು ಹಳೆಯ ಕಿರು ಅಣೆಕಟ್ಟೆಗಳು ಸ್ಥಳೀಯವಾಗಿ ಅವರ ಕೊಡುಗೆಗಳಿಗೆ ಸಾಕ್ಷಿಯಾಗಿವೆ. ಕೊಂಗಾಡಿಯಪ್ಪನವರ ಜೊತೆಗೂ ವಿಶ್ವಾಸ ಹೊಂದಿದ್ದ ಅವರು, ದೊಡ್ಡಬಳ್ಳಾಪುರಕ್ಕೆ ಕೆಲವೊಮ್ಮೆ ಭೇಟಿ ನೀಡಿದ್ದ ನೆನಪುಗಳನ್ನು ಇತಿಹಾಸ ಹೇಳುತ್ತದೆ ಎಂದರು.

ಇದೇ ವೇಳೆ ಹಿರಿಯ ಅಭಿಯಂತರ ಐ.ಎಂ.ರಮೇಶ್‌ಕುಮಾರ್, ಯುವ ಅಭಿಯಂತರ ಮಾರುತಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾಲೇಜಿನ ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಸ್‌ಡಿಯುಐಎಂ ಪ್ರಾಂಶುಪಾಲ ಡಾ.ಗೌರಪ್ಪ, ಪಾಲಿಟೆಕ್ನಿಕ್‌ಪ್ರಾಂಶುಪಾಲ ನರಸಿಂಹರೆಡ್ಡಿ, ಐಟಿಐ ಪ್ರಾಂಶುಪಾಲ ರವಿಕುಮಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾ ಖಾನ್, ಪಿಯುಸಿಯ ಜೆ.ವಿ.ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್‌, ವ್ಯವಸ್ಥಾಪಕ ಎಸ್.ಯತಿನ್‌ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

 

 

Share This Article
error: Content is protected !!
";