ಛಲವಾದಿ ನಾರಾಯಣ ಸ್ವಾಮಿ ಹಾಗೂ ಅಶೋಕ್ ರವರಿಗೆ ರಾಜಕೀಯ ವಿವೇಕ ಇಲ್ಲ:ಚಲುವರಾಯಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ವಿಪಕ್ಷ ನಾಯಕ ಆರ್.ಅಶೋಕ್  ಹಾಗೂ ಛಲವಾದಿ ನಾರಾಯಣ್ ಸ್ವಾಮಿಗೆ ರಾಜಕೀಯ ವಿವೇಕ ಇಲ್ಲ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.

- Advertisement - 

ಇಂದು ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೇ ವರ್ಷ ಆಗಿದೆ, ಡಿ.ಕೆ ಶಿವಕುಮಾರ್ ಅವರು ಸಿ.ಎಂ ಆಗಬೇಕು ಎಂಬ ಅಭಿಪ್ರಾಯ ಇದೆ ಆದರೆ ಇದು ಪಕ್ಷ ತೀರ್ಮಾನ ಮಾಡುತ್ತೆ ಎಂದು ಹೇಳಿದರು.

ಶಾಸಕರ ಖರೀದಿ ವಿಚಾರವಾಗಿ ಛಲವಾದಿ ನಾರಾಯಣ್ ಸ್ವಾಮಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿದಾಗ ಭ್ರಷ್ಟಾಚಾರ ಇರಲಿಲ್ಲ. ಭ್ರಷ್ಟಾಚಾರ ಶುರುವಾಗಿದ್ರೆ ಅದು ಬಿಜೆಪಿಯಿಂದ ಮಾತ್ರ ಅವರು ನನ್ನ ಎದರು ಮಾತನಾಡಲಿ ಮಾತನಾಡೋಣ. ರಾಹುಲ್ ಗಾಂಧಿಯವರು ಇವತ್ತಿಗೂ ಸಹ ಪಕ್ಷವನ್ನು ನಡೆಸಿಕೊಂಡು ಬರ್ತಿದ್ದಾರೆ ಎಂದರು.

- Advertisement - 

ಸುರ್ಜೇವಾಲಾ, ವೇಣುಗೋಪಾಲ ಅವರು ಗಂಭೀರ ವಾಗಿ ಸರ್ಕಾರ ಬರಲು ಜವಾಬ್ದಾರಿ ತೆಗೆದುಕೊಂಡಿದ್ದರು. ಇವರ 5 ವರ್ಷ ನಡವಳಿಕೆ ಎಲ್ಲರಿಗೂ ಗೊತ್ತಿದೆ. ಜನರ ಆಶೀರ್ವಾದದಿಂದ 138 ಸೀಟ್ ಕೊಟ್ಟಿದ್ದಾರೆ. ವಿರೋಧ ಪಕ್ಷದವರು ಮಾಧ್ಯಮವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿ.ಜೆ.ಪಿ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು ಆದರೆ ಸಕ್ಸಸ್ ಗ್ಯಾರಂಟಿ ಯೋಜನೆ ಸಕ್ಸಸ್ ಆಗಿದೆ. ಅಭಿವೃದ್ಧಿಗೆ ಒಬ್ಬೊಬ್ಬ ಶಾಸಕರಿಗೂ 50 ಕೋಟಿ ನೀಡಲಾಗಿದೆ. ಕಾಂಗ್ರೆಸ್ ಆಡಳಿತದ ಬಗ್ಗೆ ಮಾಡಿದ ಆರೋಪಗಳು  ಕೂಡ ಸುಳ್ಳಾಯಿತು ಎಂದು ಹೇಳಿದರು.

ವಿಪಕ್ಷ ನಾಯಕರುಗಳು ಮಾತನಾಡುವುದನ್ನ ಬಿಟ್ಟು ಪ್ರಾಮಾಣಿಕತೆಯಿಂದ ನನ್ನ ಮುಂದೆ ಚರ್ಚೆ ಮಾಡಲಿ. ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ ಅದನ್ನು ಸೂಕ್ತವಾಗಿ ನಾನು ನಿರ್ವಹಿಸುತ್ತೇನೆ, ಎಲ್ಲಕಿಂತ ಪಕ್ಷ ದೊಡ್ಡದು ಸಿದ್ದರಾಮಯ್ಯ ಮುಖ್ಯಮಂತ್ರಿ  ಆಗಿದ್ದಾರೆ  ನಾನು ಮಂತ್ರಿಯಾಗಿದ್ದೇನೆ ಪಕ್ಷ ಅಂದ ಮೇಲೆ ವಿವಿಧ ಚರ್ಚೆ ಇದ್ದೆ ಇರುತ್ತದೆ ಎಂದು ಹೇಳಿದರು.

 ಹೈಕಾಮಂಡ್ ಸೂಕ್ತ ಸಂದೇಶ ಕೊಡಬೇಕಾಗುತ್ತೆ
ಕರ್ನಾಟಕ ದೊಡ್ಡ ರಾಜ್ಯ ಸೂಕ್ತ ತಿರ್ಮಾನ ತೆಗೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಟ್ಯಾಕ್ಸ್ ಪಡೆದು ರಾಜ್ಯಕ್ಕೆ ಸಮಪಾಲು ಕೊಡ್ತಿಲ್ಲ. ನಮ್ಮ ಪಕ್ಷದ ಶಾಸಕರು ಜೈಲಿನಲ್ಲಿದ್ದಾರೆ ಅವರನ್ನ ನೋಡಕ್ಕೋದ್ರೆ ತಪ್ಪೇನು ಎಂದರು.

ಕುಮಾರಸ್ವಾಮಿ ಬಂಡವಾಳ ನಡೆಯುತ್ತಿಲ್ಲ ಅದಕ್ಕೆ ಬಿಜೆಪಿ ಹಿಂದೆ ಹೋಗಿದ್ದಾರೆ. ಬಿಜೆಪಿಯಲ್ಲಿ ಇವರ ಆಟ ನಡೆಯಲ್ಲ ಇವರನ್ನು ಸಿಎಂ ಮಾಡಲ್ಲ ಎಂದು ವ್ಯಂಗ್ಯವಾಡಿದರು. ಶಾಸಕ ರವಿಕುಮಾರ್ ಗಣಿಗ,ಅಪ್ಪಾಜಿಗೌಡ,ಮನ್ ಮುಲ್ ಅಧ್ಯಕ್ಷ ಶಿವಪ್ಪ,ಪ್ರಚಾರ ಸಮಿತಿ ಅಧ್ಯಕ್ಷ ರಾಧಕೃಷ್ಣ,ಅಶೋಕ್ ಇದ್ದರು

 

 

Share This Article
error: Content is protected !!
";