ಭಾರತದ ಯುವಶಕ್ತಿಯ ಪ್ರತೀಕ ವಿವೇಕಾನಂದರು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಜೈ ಹಿಂದ್ ಪ್ರತಿಷ್ಠಾನ , ಋಗ್ವೇದಿ  ಯೂತ್ ಕ್ಲಬ್,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ, ಶ್ರೀಗಂಧ ಕನ್ನಡ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಜೈ ಹಿಂದ್ ಅಭಿಯಾನ ಕಾರ್ಯಕ್ರಮವನ್ನು ಇಂದು ಪ್ರಕಾಶಭವನದಲ್ಲಿ ಉದ್ಘಾಟಿಸಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಯುವ ಮುಖಂಡ ಬಿಕೆ ರವಿಕುಮಾರ್ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತದ ಯುವಶಕ್ತಿಯ ಪ್ರತೀಕ. ಯುವಕರಲ್ಲಿ ಹೊಸ ಉತ್ಸಾಹ , ರಾಷ್ಟ್ರೀಯ ಚೇತನವನ್ನು ಉಂಟು ಮಾಡಿದ ಮಹಾನ್ ವ್ಯಕ್ತಿ. ಅಮೆರಿಕಾದ ಚಿಕಾಗೋ ಸಮ್ಮೇಳನದ ಮೂಲಕ ಭಾರತದ ಗೌರವವನ್ನು ವಿಶ್ವಕ್ಕೆ ಹರಡಿದ ಮಹಾನ್ ವ್ಯಕ್ತಿ.

- Advertisement - 

ಋಗ್ವೇದಿ  ಯೂತ್ ಕ್ಲಬ್ ಸ್ವಾಮಿ ವಿವೇಕಾನಂದ ಜಯಂತಿಯಿಂದ ನೇತಾಜಿ ಜನ್ಮದಿನ 23ರ ವರೆಗೆ ಹಮ್ಮಿಕೊಂಡಿರುವ ಜೈ ಹಿಂದ್ ಅಭಿಯಾನ ಯಶಸ್ವಿಯಾಗಲಿ. ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ. ಕಡ್ಡಾಯ ಶಿಕ್ಷಣ, ದೈಹಿಕ ಪರಿಶ್ರಮ ಹಾಗೂ ದೇಶದ ಬಗ್ಗೆ ಚಿಂತಿಸುವ ಚಿಂತನೆಗಳನ್ನು ತುಂಬಬೇಕಿದೆ ಎಂದರು.

ಉಪನ್ಯಾಸ ನೀಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ  ಸುರೇಶ್  ಎನ್ ಋಗ್ವೇದಿ ಸ್ವಾಮಿ ವಿವೇಕಾನಂದರು ಭಾರತದ ಆತ್ಮ. ಭಾರತವನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರ ಸಮಗ್ರ ಇತಿಹಾಸವನ್ನು ಅಧ್ಯಯನ ಮಾಡಬೇಕು . ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಯುವ ಸಮುದಾಯದ ಆದರ್ಶ. ವಿಶ್ವಕ್ಕೆ ಯುವ ಸಮುದಾಯ ಸದಾ ಕಾಲ ಜಾಗೃತ ಕಾರ್ಯವನ್ನು ಮಾಡಬೇಕಿದೆ . ಭಾರತ ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿರುವುದು ಭಾರತ ಜಗತ್ ಪ್ರಸಿದ್ಧ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ .

- Advertisement - 

ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಸ್ವಾಮಿ ವಿವೇಕಾನಂದ ಜಯಂತಿ ಇಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯ ವರೆಗೆ ಹಲವು ಗ್ರಾಮಗಳಲ್ಲಿ ವಿವೇಕ ನೇತಾಜಿ ಜೈ ಹಿಂದ್ ಅಭಿಯಾನ  ಹಮ್ಮಿಕೊಂಡಿದೆ ಎಂದು ತಿಳಿಸಿದರು.

ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ದಾನೇಶ್ವರಿ ಅವರು ವಹಿಸಿ ಮಾತನಾಡಿ ಭಾರತ ಸಂಸ್ಕೃತಿ ಪರಂಪರೆಯ ನಾಡು. ಭಾರತಕ್ಕೆ ವಿಶೇಷ ಗೌರವವಿದೆ. ಭಾರತದ ಪ್ರತಿಯೊಬ್ಬರು ಯುವಶಕ್ತಿಯ ಪ್ರತೀಕವಾಗಿದ್ದಾರೆ.

ತಮ್ಮ ಆಧ್ಯಾತ್ಮಿಕ, ಸಾಮಾಜಿಕ ಬೆಳವಣಿಗೆಯ ಮೂಲಕ ಶ್ರೇಷ್ಠ ಮನಸ್ಸುಗಳಾಗಿ ಸಮಾಜಕ್ಕೆ ಅರ್ಪಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳೋಣ . ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿ ಇಡೀ ವಿಶ್ವಕ್ಕೆ ಮಾದರಿಯಾದ ಸಂಸ್ಥೆಯನ್ನು ರೂಪಿಸಿ ಯುವಶಕ್ತಿಗೆ ಸದಾಕಾಲ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದೆ . ಸ್ವಾಮಿ ವಿವೇಕಾನಂದರ ದೇಶಭಕ್ತಿ ,ಸೇವೆ ತ್ಯಾಗ ಗುಣಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.

ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ , ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ರವಿಚಂದ್ರಪ್ರಸಾದ್ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Share This Article
error: Content is protected !!
";